Home ಕೂದಲ ಆರೈಕೆ How to control hair fall, boost the hair regrowth in Kannada language...

How to control hair fall, boost the hair regrowth in Kannada language – ಕೂದಲು ಉದುರುವುದನ್ನು ತಡೆಗಟ್ಟುವುದು ಹೇಗೆ ಹಾಗೂ ಮರುಬೆಳಯುವಿಕೆಯ ವರ್ಧನೆಗೆ ವಿಧಾನಗಳು

ಕೂದಲು ಉದುರುವಿಕೆ ಸ್ತ್ರೀ ಹಾಗೂ ಪುರುಷರಲ್ಲಿಬ್ಬರಲ್ಲಿಯೂ ಕಂಡುಬರುವ ಸಮಸ್ಯೆ. ಇದಕ್ಕೆ ಮುಖ್ಯ ಕಾರಣ ವಂಶವಾಹಿಯೇ ಆಗಿದ್ದರೂ ಸಹ, .ಹಾರ್ಮೊನ್ ಅಸಮತೋಲನ, ಥೈರಾಯ್ಡ್ ಗ್ರಂಥಿಯ ನಿಷ್ಕ್ರಿಯತೆ, ಪೋಷಕಾಂಶಗಳ ಕೊರತೆ, ನೆತ್ತಿಯಲ್ಲಿನ ಕಡಿಮೆ ರಕ್ತ ಪರಿಚಲನೆ ಹೀಗೆ ಹತ್ತು ಹಲವು ಕಾರಣಗಳಿಂದಲೂ ಕೂದಲು ಉದುರಬಹುದು. ಬಹಳಷ್ಟು ಜನರಿಗೆ ಕೂದಲು ಉದುರುವುದು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೂದಲು ಉದುರುವುದಕ್ಕೆ ಕಾರಣ ಏನೇ ಇದ್ದರೂ, ಹಲವು ನೈಸರ್ಗಿಕ ವಿಧಾನಗಳನ್ನು ಹಾಗೂ ಮನೆ ಮದ್ದುಗಳನ್ನು ಬಳಸಿ ನಾವು ಅದನ್ನು ತಡೆಗಟ್ಟಬಹುದು. ಅಷ್ಟೇ ಅಲ್ಲದೆ, ಕೂದಲ ಮರುಬೆಳವಣಿಗೆಯಲ್ಲೂ ಸಹ ಈ ವಿಧಾನಗಳು ಸಹಾಯ ಮಾಡುತ್ತವೆ. ಈ ಕೆಲ್ಳಗಿನ ನೈಸರ್ಗಿಕ ವಿಧಾನ ಹಾಗೂ ಮನೆ ಮದ್ದು ಗಳನ್ನು ಬಳಸಿ ಆರೋಗ್ಯವಂತ ಕೇಶ ಸೌಂದರ್ಯ ನಿಮ್ಮದಾಗಿಸಿಕೊಳ್ಳಿ.

ಕೂದಲು ಉದುರುವಿಕೆ ತಡೆಯಲು ಮೆಂತ್ಯೆ (Fenugreek for hair loss)

ಕೂದಲು ಉದುರುವುದನ್ನು ತಡೆಗಟ್ಟಲು ಹಾಗೂ ಕೂದಲ ಮರುಬೆಳವಣಿಗೆಗೆ ಮೆಂತ್ಯೆ ಬಹಳ ಪರಿಣಾಮಕಾರಿ ಔಷದಿ. ಮೆಂತ್ಯೆಯಲ್ಲಿರುವ ಕೆಲವು ಪೋಷಕಾಂಶಗಳು ಕೂದಲ ಬೆಳವಣಿಗೆಗೆ ಸಹಾಯಕವಾಗಿವೆ. ಅಷ್ಟೇ ಅಲ್ಲದೆ ಕೂದಲ ಬೇರನ್ನು ಗಟ್ಟಿಗೊಳಿಸುವಲ್ಲಿ ಸಹಾಯಕವಾದ ಸಸಾರಜನಕ ಹಾಗೂ ನಿಕೊಟಿನಿಕ್ ಆಮ್ಲವು ಶ ಮೆಂತ್ಯೆಯಲ್ಲಿ ಹೇರಳವಾಗಿವೆ.

ಇಷ್ಟೊಂದು ಉಪಯೋಗಗಳಿರುವ ಮೆಂತ್ಯೆಯನ್ನು ಹೇಗೆ ಬಳಸುವುದು ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿ ಸುತ್ತುತ್ತಿರಬಹುದು ಅಲ್ಲವೇ? ಬಳಸುವ ವಿಧಾನ ಸಹ ಬಹಳ ಸುಲಭ. ರಾತ್ರಿ ಮಲಗುವ ಮುನ್ನ ಮೆಂತ್ಯೆ ಬೀಜಗಳನ್ನು ನೀರಿನಲ್ಲಿ ನೆನೆಸಿಡಿ. ಮಾರನೇ ಬೆಳ್ಳಿಗೆ ನೆನೆಸಿದ ಮೆಂತ್ಯೆ ಹಾಗೂ ನೀರನ್ನು ರುಬ್ಬಿ ತಲೆಗೆ ಹಚ್ಚಿಕೊಳ್ಳಿ. ಹಚ್ಚಿದ ನಂತರ ಅದು ಒಣಗದಂತೆ ತಲೆಗೆ ಶವರ್ ಕ್ಯಾಪ್ ಹಾಕಿಕೊಳ್ಳಿ. 30 ನಿಮಿಷಗಳ ನಂತರ ತಲೆಯನ್ನು ನೀರಿನೊಂದಿಗೆ ತೊಳೆಯಿರಿ. ಶ್ಯಾಂಪೂ ಅಥವಾ ಸಾಬೂನು ಬಳಸುವ ಅವಶ್ಯಕತೆ ಇರುವುದಿಲ್ಲ. ಈ ರೀತಿಯಾಗಿ ವಾರಕ್ಕೆ ಎರಡು ಬಾರಿ ಮಾಡುವುದರಿಂದ ಪರಿಣಾಮಕಾರಿ ಫಲಿತಾಂಶವನ್ನು ಪಡೆಯಬಹುದು.

ಕೂದಲು ಉದುರುವುದನ್ನು ತಡೆಯಲು ಲೊಳೆಸರ (Aloe vera for hair loss)

ಇತ್ತೀಚೆಗೆ ಹೆಚ್ಚುತಿರುವ ಮಾಲಿನ್ಯದಿಂದ ಕೂದಲು ಉದುರುವ ಸಮಸ್ಯೆಯು ಸಹ ಬಹಳ ಸಾಮಾನ್ಯವಾಗಿ ಕಂಡುಬರುತ್ತಿದೆ. ಕೂದಲು ಉದುರುವುದರಿಂದ ಕಾಪಾಡಿಕೊಳ್ಳುವುದಕ್ಕೆ ನಾವು ಲೊಳೆಸರವನ್ನು ಬಳಸಬಹುದು. ಲೊಳೆಸರದ ಮಂದವಾದ ಕ್ಷಾರೀಯ ಗುಣ ನಮ್ಮ ನೆತ್ತಿಯ ನೈಸರ್ಗಿಕ ಪಿ. ಹೆಚ್(PH) ಮಟ್ಟವನ್ನುಕಾಯ್ದುಕೊಳ್ಳಲು ಸಹಾಯ ಮಾಡುವುದರಿಂದ ನೆತ್ತಿಯ ಚರ್ಮದ ಆರೋಗ್ಯ ಹಾಗೂ ಕೂದಲ ಮರು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ತಲೆ ಹೊಟ್ಟನ್ನು ನಿವಾರಿಸುವಲ್ಲಿ ಸಹ ಲೊಳೆಸರ ಬಹಳ ಸಹಾಯಕಾರಿ. ಲೊಳೆಸರದ ಎಲೆಯನ್ನು ಕತ್ತರಿಸಿ ಅದರಲ್ಲಿರುವ ಸಾರವನ್ನು ನಿಮ್ಮ ತಲೆಗೆ ಹಾಗೂ ಕೂದಲಿಗೆ ಹಚ್ಚಿಕೊಳ್ಳಿರಿ. 45 ನಿಮಿಷಗಳು ಅಥವಾ ಒಂದು ಗಂಟೆಯ ನಂತರ ನೀರಿನಲ್ಲಿ ತಲೆಯನ್ನು ತೊಳೆದುಕೊಳ್ಳಿರಿ. ಈ ರೀತಿಯಾಗಿ ವಾರಕ್ಕೆ ಮೂರು ನಾಲ್ಕು ಬಾರಿ ಮಾಡುವುದರಿಂದ ಫಲಿತಾಂಶ ಉತ್ತಮವಾಗಿರುತ್ತದೆ.

ಕೂದಲು ಉದುರುವಿಕೆ ತಡೆಯುವುದಕ್ಕೆ ಈರುಳ್ಳಿ (Onion for fighting hair loss)

ನಿಮ್ಮ ಕೂದಲು ಅತಿಯಾಗಿ ಉದುರುತ್ತಿದ್ದರೆ, ಅದನ್ನು ತಡೆಗಟ್ಟಲು ಹಾಗೂ ಕೂದಲು ಮತ್ತೆ ಬೆಳೆಯುವಂತೆ ಮಾಡಲು ಈರುಳ್ಳಿ ಒಂದು ಅಧ್ಭುತವಾದ ಔಷಧಿಯಾಗಿ ಕೆಲಸಮಾಡುತ್ತದೆ. ಹೌದು, ನಿಮ್ಮ ಅಡುಗೆಮನೆಯಲ್ಲಿರುವ ಈರುಳ್ಳಿಯಲ್ಲಿ ಹೆಚ್ಚಾಗಿರುವ ಗಂಧಕದ ಅಂಶ ನಮ್ಮ ನೆತ್ತಿಯ ರಕ್ತ ಪರಿಚಲನೆಯನ್ನು ಹೆಚ್ಚಿಸಿ ಕೂದಲ ಬೇರಿಗೆ ಶಕ್ತಿಯನ್ನು ಒದಗಿಸುತ್ತದೆ ಹಾಗೂ ಆದರ ಜೀವಿರೋಧೀ ಗುಣ ನಮ್ಮ ನೆತ್ತಿಯಲ್ಲಿರಬಹುದಾದ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ. ತಾಜಾ ಈರುಳ್ಳಿಗಳನ್ನು ರುಬ್ಬಿ ಅದರ ರಸವನ್ನು ಹೀರಿತೆಗೆದು ನಿಮ್ಮ ನೆತ್ತಿಗೆ ಹಚ್ಚಿಕೊಳ್ಳಿ ಹಾಗೂ ಅರ್ಧ ಗಂಟೆಯ ನಂತರ ಸೌಮ್ಯವಾದ ಸಾಬೂನು ಹಾಗೂ ನೀರಿನೊಂದಿಗೆ ತೊಳೆಯಿರಿ.

ಬಿಸಿ ಎಣ್ಣೆಯ ಮರ್ಧನದಿಂದ ಕೂದಲ ಉದುರುವಿಕೆಯ ತಡೆಗಟ್ಟುವಿಕೆ (Hot oil massage to reduce hair fall)

ಕೂದಲು ಉದುರುವುದಕ್ಕೆ ಮುಖ್ಯ ಕಾರಣವೆಂದರೆ ಪೊಶಕಮ್ಶಗಳ ಕೊರತೆ. ಆದ್ದರಿಂದ ಉಗುರು ಬೆಚ್ಚಗಿನ ಎಣ್ಣೆಯನ್ನು ಬಳಸಿ ತಲೆಯ ಮಾಲಿಶು ಮಾಡಿಕೊಳ್ಳುವುದರಿಂದ ಕೂದಲು ಉದುರುವುದನ್ನು ತಡೆಗಟ್ಟಬಹುದು. ಮಾಲಿಶಿಗಾಗಿ ವಿಟಮಿನ್ “ಇ” ಹೆಚ್ಚಾಗಿರುವ ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆ, ಸಾಸಿವೆ ಎಣ್ಣೆ, ಆಲಿವ್ ಎಣ್ಣೆ ಅಥವಾ ಜೋಜೋಬ(Jojoba oil) ಎಣ್ಣೆಯನ್ನು ಉಪಯೋಗಿಸಬಹುದು. ಮುಖ್ಯವಾಗಿ ನಿಮ್ಮಗೆ ತಲೆ ಹೊಟ್ಟಿನ ಸಮಸ್ಯೆ ಇದ್ದರಂತೂ ಜೋಜೋಬ ಎಣ್ಣೆ ಅಧ್ಬುತವಾದ ಆಯ್ಕೆ. ಅವ್ಶ್ಯವಾದರೆ ಮೇಲಿನ ಎಲ್ಲಾ ಎಣ್ಣೆಗಳನ್ನು ಬೆರೆಸಿ ಸಹ ಮಾಲಿಶಿಗೆ ಉಪಯೋಗಿಸಬಹುದು. ಕಬ್ಬಿಣ ಅಥವಾ ಸ್ಟೀಲ್ ಪಾತ್ರೆಯಲ್ಲಿ ಎಣ್ಣೆಯನ್ನು ಉಗುರುಬೆಚ್ಚಗೆ ಮಾಡಿಕೊಂಡು ನಂತರ ತಲೆಗೆ ಹಾಗೂ ಕೂದಲಿಗೆ ಹಚ್ಚಿಕೊಳ್ಳಿ ಹಾಗೂ ನಿಧಾನವಾಗಿ ಮಾಲಿಶು ಮಾಡಿ. ಉತ್ತಮ ಫಲಿತಾಂಶಕ್ಕಾಗಿ ಮಲಿಶನ್ನು ಮಲಗುವ್ ಮುಂಚೆ ಮಾಡಿಕೊಂಡು ಬೆಳ್ಳಿಗೆ ತಲೆಸ್ನಾನ ಮಾಡಿ. ಇಲ್ಲವೇ ಮಾಲಿಶು ಮಾಡಿದ ಒಂದು ಗಂಟೆಯ ನಂತರ ತಲೆಸ್ನಾನ ಮಾಡಬಹುದು.

ಕೂದಲು ಉದುರುವುದನ್ನು ತಡೆಗಟ್ಟುವ ಹುಳಿ ಮೊಸರು (Sour curd as a hair fall solution)

ಕೂದಲು ಉದುರುವಿಕೆಗೆ ಒಂದು ಅಧ್ಭುತವಾದ ಮನೆಮದ್ದು ಎಂದರೆ ಮೊಸರು. ಅಷ್ಟೇ ಅಲ್ಲದೆ ಕೋಮಲವಾದ, ಕಾಂತಿಯುಕ್ತ ಕೂದಲನ್ನು ಪಡೆಯುವಲ್ಲಿ ಸಹ ಮೊಸರು ಸಹಾಯಮಾಡುತ್ತದೆ. ಮೊಸರನ್ನು ನೇರವಾಗಿ ತಲೆ ಹಾಗೂ ಕೂದಲಿಗೆ ಹಚ್ಚಿಕೊಳ್ಳಬಹುದು ಅಥವಾ ಎರಡು ಚಮಚ ಮೊಸರಿಗೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಆದನ್ನು ತಲೆಗೆ ಹಚ್ಚಿಕೊಳ್ಳಬಹುದು. ಹಚ್ಚಿದ ಮೂವತ್ತು ನಿಮಿಷಗಳ ನಂತರ ನೀರಿನಿಂದ ತೊಳೆದುಕೊಳ್ಳಬೇಕು. ಇದ್ನ್‌ನ್ನು ಮಾಡುವುದರಿಂದ ಉದ್ದವಾದ ಹಾಡು ಆರೋಗ್ಯವಾದ ಕೂದಲನ್ನು ಪಡೆಯಬಹುದು.

ಕೂದಲು ಉದುರುವುದನ್ನು ತಡೆಯುವ ನೆಲ್ಲಿಕಾಯಿ (Indian gooseberry to reduce hair fall)

ನೆಲ್ಲಿಕಾಯಿಯ ಸಹಾಯದಿಂದ ಕೂದಲು ಉದುರುವುದನ್ನು ನಿಲ್ಲಿಸುವುದು ಮಾತ್ರವಲ್ಲದೆ ಕೂದಲ ತ್ವರಿತ ಬೆಳವಣಿಗೆಯನ್ನು ಸಹ ಹೊಂದಬಹುದು. ವಿಟಮಿನ್ “ಸಿ” ಕೊರತೆಯಿಂದ ಕೂದಲು ಉದುರುವುದರಿಂದ, ನೆಲ್ಲಿಕಾಯಿಯಲ್ಲಿರುವ ವಿಟಮಿನ್ “ಸಿ” ನೆತ್ತಿಯ ಆರೋಗ್ಯ ಹಾಗೂ ಕೂದಲ ಬೆಳೆಯುವಿಕೆಗೆ ಬಹಳ ಸಹಾಯ ಮಾಡುತ್ತದೆ. ಕೆಲವು ನೆಲ್ಲಿಕಾಯಿಗಳ ಬೀಜವನ್ನು ತೆಗೆದು ತಿರುಳನ್ನು ಮಾತ್ರ ರುಬ್ಬಿಕೊಂಡು ಅದಕ್ಕೆ ಎರಡು ಹನಿ ನಿಂಬೆ ಹಣ್ಣಿನ ರಸವನು ಬೆರೆಸಿ ತಲೆಗೆ ಹಚ್ಚಿಕೊಳ್ಳಬೇಕು. ನಿಂಬೆಹಣ್ಣಿನ ರಸವನ್ನು ಬೆರೆಸದೆಯೂ ಸಹ ಬಾರಿ ನೆಲ್ಲಿಯ ತಿರುಳನ್ನು ಹಚ್ಚಿಕೊಳ್ಳಬಹುದು. ಒಂದು ಗಂಟೆಯ ನಂತರ ತಲೆಯನ್ನು ನೀರಿನಲ್ಲಿ ತೊಳೆದುಕೊಳ್ಳಬೇಕು.

ಜ್ಯೇಷ್ಟಮಧು ಬೇರಿನಿಂದ ಕೂದಲು ಉದುರುವಿಕೆಗೆ ಚಿಕಿತ್ಸೆ (Licorice roots to stop hair fall)

ನೈಸರ್ಗಿಕವಾಗಿ ಕೂದಲು ಉದುರುವುದನ್ನು ತಡೆಗಟ್ಟುವುದಕ್ಕೆ ಇರುವ ಪ್ರಮುಖ ಮಾರ್ಗವೆಂದರೆ ಜ್ಯೇಷ್ಟಮಧು. ಜ್ಯೇಷ್ಟಮಧು ಬೇರಿನ ಸಹಾಯದಿಂದ ನೆತ್ತಿಯ ತುರಿಕೆಯನ್ನು ಕಡಿಮೆ ಮಾಡಿ ತಲೆಹೊಟ್ಟಿನಿಂದ ಉಂಟಾಗುವ ಕೂದಲನ್ನು ಉದುರುವಿಕೆಯನ್ನು ತಪ್ಪಿಸಬಹುದು. ಜ್ಯೇಷ್ಟಮಧು ಬೇರಿನ ಹಲವು ಎಸಳುಗಳನ್ನು ಇಡೀ ರಾತ್ರಿ ಹಾಲಿನಲ್ಲಿ ನೆನೆಸಿಟ್ಟು ಬೆಳ್ಳಿಗೆ ರುಬ್ಬಬೇಕು. ರುಬ್ಬಿದ ಲೇಪನವನ್ನು ಮರುದಿನ ರಾತ್ರಿ ಕೂದಲು ಉದುರುವ ಜಾಗಕ್ಕೆ ಹಚ್ಚಿಕೊಂಡು ಮಲಗಬೇಕು. ಮರುದಿನ ಬೆಳ್ಳಿಗೆ ಸಾಬೂನು ಬಳಸಿ ತಲೆಯನ್ನು ತೊಳೆದುಕೊಳ್ಳಬಹುದು.

ದಾಸವಾಳ ಹೂವಿನ ಸಹಾಯದಿಂದ ಕೂದಲು ಉದುರುವಿಕೆಗೆ ಚಿಕಿತ್ಸೆ (How to control hair fall with hibiscus leaves or flowers)

ಕೂದಲು ಉದುರುವುದನ್ನು ತಡೆಯುವುದಕ್ಕೆ ಇದು ಆಯುರ್ವೇದದ ಅತ್ಯುತ್ತಮವಾದ ಮನೆಮದ್ದು. ದಾಸವಾಳದ ಎಲೆ ಹಾಗೂ ಹೂವುಗಳು ಕೂದಲು ಉದುರುವುದನ್ನು ತಡೆಗಟ್ಟಿ ಕೂದಲ ಬೆಳವಣಿಗೆಗೆ ಸಹಕರಿಸುತ್ತದೆ. ಅಷ್ಟೇ ಅಲ್ಲದೆ ಸೀಳ್ತುದಿ ಹಾಗೂ ತಲೆ ಹೊಟ್ಟಿಗು ಸಹ ಇದು ಬಹಳ ಒಳ್ಳೇಯ ಔಷಧಿ. ಹತ್ತು ಹನ್ನೆರಡು ದಾಸವಾಳದ ಹೂವುಗಳ್ಲನ್ನು ಎರಡು ಚಮಚೆ ಕೊಬ್ಬರಿ ಎಣ್ಣೆಯಲ್ಲಿ ಚೆನ್ನಾಗಿ ಕುದಿಸಿ, ನಂತರ ಅದರಿಂದ ಎಣ್ಣೆಯನ್ನು ಹಿಂಡಿ ತೆಗೆದ ಎಣ್ಣೆಯನ್ನು ತಲೆಗೆ ಹಾಗೂ ಕೂದಲಿಗೆ ರಾತ್ರಿ ಹಚ್ಚಿಕೊಂಡು ಬೆಳ್ಳಿಗೆ ತೊಳೆಯಬೇಕು. ದಾಸವಾಳದ ಎಲೆಗಳನ್ನು ಬಳಸಬೇಕೆಂದರೆ, ಎಲೆಗಳನ್ನು ಅರೆದು, ಅರೆದ ಎಲೆಗಳನ್ನು ತಲೆಗೆ ಹಾಗೂ ಕೂದಲಿಗೆ ಹಚ್ಚಿಕೊಳ್ಳಿ. ಮೂವತ್ತು ನಿಮಿಷಗಳ ನಂತರ ತೊಳೆದುಬಿಡಿ. ಇದರಿಂದ ಕೂದಲು ಉದುರುವುದು ಕಡಿಮೆಯಾಗಿ ಬೆಳವಣಿಗೆ ವೃದ್ಧಿಯಾಗುತ್ತದೆ.

ಕೂದಲು ವೃದ್ದಿ ಮಾಡುವುದಕ್ಕೆ ಬೀಟ್ರೂಟ್ (Beetroot) ರಸ(Beetroot juice to stop hair fall)

ನಮ್ಮ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಬೀಟ್ರೂಟ್ ಕೂದಲನ್ನು ಕಾಪಾಡಿಕೊಳ್ಳುವಲ್ಲಿ ಬಹಳ ಸಹಾಯಕಾರಿ. ಬೀಟ್ರೂಟ್ನಲ್ಲಿರುವ ರಂಜಕ, ಕ್ಯಾಲ್ಸಿಯಂ, ಸಸಾರಜನಕ, ಪೊಟ್ಯಾಶಿಯಂ, ಕಾರ್ಬೊಹೈಡ್ರೆಟ್, ವಿಟಮಿನ್ “ಬೀ” ಹಾಗೂ “ಸಿ” ಸತ್ವ ಕೂದಲ ಬೆಳವಣಿಗೆಗೆ ಸಹಾಯಕಾರಿ. ಬೀಟ್ರೂಟ್ ರಸವನ್ನು ದಿನವೂ ಸೇವಿಸುವುದರಿಂದ ಅಥವಾ ಬೀಟ್ರೂಟನ್ನು ದಿನವೂ ಅಡುಗೆಯಲ್ಲಿ ಬಳಸುವುದರಿಂದ ಕೂದಲ ಬೆಳವಣಿಗೆಗೆ ಸಹಾಯವಾಗುತ್ತದೆ. ಸಾಧ್ಯವಾಗದಿದಲ್ಲಿ ಬೀಟ್ರೂಟ್ ಎಲೆಗಳನ್ನು ರುಬ್ಬಿ ತಲೆ ಹಾಗೂ ಕೂದಲಿಗೆ ಹಚ್ಚಿಕೊಳ್ಳಬಹುದು. ಬೀಟ್ರೂಟ್ ಎಲೆಗಳನ್ನು ನೀರಿನಲ್ಲಿ ಕುದಿಸಿ ಅದನ್ನು ರುಬ್ಬಿಕೊಳ್ಳಬೇಕು. ಗಟ್ಟಿಯಾಗಿ ರುಬ್ಬಿದ ಎಲೆಗಳನ್ನು ತಲೆಗೆ ಹಚ್ಚಿ ಮೂವತ್ತು ನಿಮಿಷಗಳ ನಂತರ ನೀರಿನಲ್ಲಿ ತೊಳೆಯಬೇಕು. ಈ ರೀತಿಯಾಗಿ ವಾರಕ್ಕೆ ಎರಡು ಬಾರಿ ಮಾಡುವುದರಿಂದ ಒಳ್ಳೆಯ ಬೆಳವಣಿಗೆಯನ್ನು ಕಾಣಬಹುದು.

ಕೊಬ್ಬರಿ ಹಾಲಿನಿಂದ ಕೂದಲ ಬೆಳವಣಿಗೆ (Coconut milk for hair regrowth)

ಕೊಬ್ಬರಿಯಲ್ಲಿರುವ ಕೊಬ್ಬು ಹಾಗೂ ಸಸಾರಜನಕ ಕೂದಲ ಬೆಳವಣಿಗೆಗೆ ಬಹಳ ಸಹಕಾರಿ. ಬಹಳ ಬೇಗ ಕೂದಲು ಬೆಳೆಯಲು ಹಾಗೂ ಉದುರುವುದನ್ನು ತಪ್ಪಿಸುವಲ್ಲಿ ಕೊಬ್ಬರಿ ಬಹಳ ಮುಖ್ಯ. ಕೊಬ್ಬರಿಯನ್ನು ತುರಿದು ಅದನ್ನು ರುಬ್ಬಬೇಕು. ರುಬ್ಬಿದ ಕೊಬ್ಬರಿಯನ್ನು ಹಿಂಡಿ ಅದರ ಹಾಲನ್ನು ತೆಗೆದು ತಲೆಗೆ ಹಾಗೂ ಕೂದಲ ಕೊನೆಗೆ ಹಚ್ಚಿಕೊಳ್ಳಬೇಕು. ಮೂವತ್ತು ನಿಮಿಷಗಳಿಂದ ಒಂದು ಗಂಟೆ ಕಾಲದ ನಂತರ ನೀರಿನಲ್ಲಿ ತೊಳೆಯಬೇಕು. ಇದರಿಂದ ಕೂದಲು ತೆಳುವಾಗುವುದನ್ನು ಕಡಿಮೆಮಾಡಿ ಬೆಳವಣಿಗೆಯನ್ನು ವೃದ್ಧಿಸಬಹುದು.

ಟೀ ಕಾಷಾಯದಿಂದ ಕೂದಲ ರಕ್ಷಣೆ (Tea decoction for controlling hair fall)

ಟೀ ಎಲೆಯಲ್ಲಿರುವ ಟ್ಯಾನಿಕ್ ಆಮ್ಲ ತಲೆಯ ಸೋಂಕನ್ನು ಕಡಿಮೆಮಾಡಿ ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ನೀರಿನಲ್ಲಿ ಟೀ ಎಲೆಗಳನ್ನು ಕುದಿಸಿ ಕಷಾಯವನ್ನು ತಯಾರುಮಾಡಿ, ಸೋಸಿಕೊಂಡು ಅದಕ್ಕೆ ಒಂದು ನಿಂಬೆ ಹಣ್ಣನು ಹಿಂಡಿ, ಶ್ಯಾಂಪೂವಿನ ನಂತರ ಅದರಲ್ಲಿ ತಲೆಯನ್ನು ತೊಳೆಯಬೇಕು. ಆದರೆ ಟೀಯಲ್ಲಿ ತೊಳೆದ ನಂತರ ಶ್ಯಾಂಪೂ ಬಳಸಬಾರದು. . ಇದರಿಂದ ಕೂದಲು ಉದುರುವುದನ್ನು ತಪ್ಪಿಸಬಹುದು.

ಶಾನ ಬೀಜ(shana seeds) ದಿಂದ ಕೂದಲ ಬೆಳವಣಿಗೆ (Shana seeds for boosting hair growth)

ಶಾನ ಬೀಜಗಳನ್ನು ಬಳಸಿ ಕೂದಲು ತಡೆಗಟ್ಟಬಹುದು ಅಲ್ಲದೆ ಆಯುರ್ವೇದದ ಔಷದಿಯನ್ನು ಮಾಡಬಹುದು. ಕೂದಲ ರಕ್ಷಣೆಗೆ ಇದು ಬಹಳ ಪ್ರಸಿದ್ದವಾದ ಚಿಕಿತ್ಸೆಯಾಗಿರುತ್ತದೆ. ಎರಡು ಚಮಚೆ ಶಾನ ಬೀಜಗಲನ್ನು ತೆಗೆದುಕೊಂಡು ಕೊಬ್ಬರೀ ಎಣ್ಣೆಯಲ್ಲಿ ರುಬ್ಬಿಕೊಳ್ಳಬೇಕು. ರುಬ್ಬಿದ ಬೀಜ ಹಾಗೂ ಎಣ್ಣೆಯನ್ನು ಕೂದಲು ಹಾಗೂ ತಲೆಗೆ ಕಚ್ಚಿಕೊಳ್ಳಬೇಕು. ಮುಖ್ಯವಾಗಿ ಕೂದಲ ಬುಡಗಳಿಗೆ ಹಚ್ಚಬೇಕು. ಹದಿನೈದು ನಿಮಿಷಗಳ ನಂತರ ನೀರಿನಲ್ಲಿ ತೊಳೆದುಕೊಳ್ಳಬಹುದು.

ಪಾಲಕ್ಕಿ ಸೊಪ್ಪು ಹಾಗೂ ಲೇಟುಸ್ ಸೊಪ್ಪಿನ ರಸದಿಂದ ಅಕೂದಲ ಉದುರುವಿಕೆಯ ಚಿಕಿತ್ಸೆ (Spinach and lettuce juice to stop hair fall)

ಕೂದಲು ಉದುರುವುದನ್ನು ನಿಲ್ಲಿಸಲು ಅಧ್ಭುತವಾದ ಔಷಧಿಯಿದು. ವಿಟಮಿನ್, ಖನಿಜ ಮಾತ್ರವಲ್ಲದೆ ಲೋಹ ಹಾಗೂ ಬಯೋಟಿನ್(biotin)ಗಳನ್ನು ಯತ್ತೇಚ್ಚವಾಗಿರುವ ಈ ಹಸಿರು ಎಲೆಗಳು ಕೂದಲ ಆರೈಕೆಯಲ್ಲಿ ಬಹಳ ಉಪಯೋಗಿ. ಇವನ್ನೂ ನಿಮ್ಮ ದಿನ ನಿತ್ಯದ ಅಡುಗೆಯಲ್ಲಿ ಬಳಸುವುದರಿಂದ ಉತ್ತಮ ಕೇಶ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇವನ್ನೂ ಅರ್ಧ ಬೇಯಿಸಿ ತಿನ್ನುವುದರಿಂದ ಹೆಚ್ಚಿಗೆ ಲಾಭಗಳನ್ನು ಪಡೆಯಬಹುದು. ಇಲ್ಲವೇ ಇವುಗಳ ರಸವನ್ನು ಮಾಡಿ ಕುಡಿಯಬಹುದು. ದಿನಕ್ಕೆ ಎರಡು ಬಾರಿ ಪಾಲಕ್ಕಿ ಹಾಗೂ ಲೇಟುಸ್ ರಸವನ್ನು ಸೇವಿಸುವುದರಿಂದ ಕೂದಲು ಆರೋಗ್ಯವಾಗಿರುತ್ತವೆ.

ಕೂದಲ ರಕ್ಷಣೆಗೆ ಮೊಟ್ಟೆಯ ಬಿಳಿ (Reduce hair falls with egg white)

ಸಸಾರಜನಕ ಹಾಗೂ ವಿಟಮಿನ್ಗಳ ಆಗರವಾಗಿರುವ ಮೊಟ್ಟೆಯನ್ನು ಬಳಸಿ ನಿಮ್ಮ ಕೇಶಗಳನ್ನು ಕಾಪಾಡಿಕೊಳ್ಳಬಹುದು. ಅಲ್ಲದೆ ಕೂದಲ್ಲನು ಕಾಂತಿಯುಕ್ತವಾಗಿರಿಸಿಕೊಳ್ಳಬಹುದು. ಮೊಟ್ಟೆಗಳನ್ನು ಹೊಡೆದು ಅದರಲ್ಲಿನ ಹಳದಿ ಭಾಗವನ್ನು ಬೇರೆಮಾಡಿಕೊಳ್ಳಿ. ಬರಿಯ ಬಿಳಿ ಭಾಗವನ್ನು ತೆಗೆದುಕೊಂಡು ಕೂದಲು ಹಾಗೂ ನೆತ್ತಿಗೆ ಹಚ್ಚಿಕೊಳ್ಳಿರಿ. ಪೋಷಕಾಂಶಗಳ ಕೊರತೆಯಿಂದ ನಿಮ್ಮ ಕೂದಲು ಉದುರುತ್ತಿದ್ದರೆ ಈ ವಿಧಾನ ಬಹಳ ಪರಿಣಾಮಕಾರಿ. ಮೂವತ್ತು ನಿಮಿಷಗಳಿಂದ ಒಂದು ಗಂಟೆಯ ನಂತರ ತಲೆಗೆ ಹಚ್ಚಿದ ಮೊಟ್ಟೆಯನ್ನು ತೊಳೆದುಬಿಡಿ. ಇದರಿಂದ ಕೂದಲು ಬಲವಾಗಿ ಆರೋಗ್ಯವಾಗಿ ಇರುತ್ತದೆ. ವಾರಕ್ಕೆ ಒಮ್ಮೆ ಈ ರೀತಿ ಮಾಡುವುದರಿಂದ ಕೂದಲು ಉದ್ದವಾಗಿ ಬೆಳೆಯುತ್ತದೆ.

ಹುಳಿ ಸೇಬಿನ ರಸ (Apple cider vinegar to reduce hair fall)

ಆಪಲ್ ಸೀಡರ್ ವಿನಿಗರ್ ಎಂದು ಕರೆಯಲ್ಪಡುವ ಸೇಬಿನಿಂದ ತಯಾರಿಸಿದ ಹುಳಿರಸವನ್ನು ಬಳಸಿ ಕೂದಲು ಉದುರುವುದನ್ನು ತಡೆಯಬಹುದು ಹಾಗೂ ಸೌಮ್ಯವಾದ ಕೂದಲನ್ನು ಪಡೆಯಬಹುದು. ಒಂದು ಭಾಗ ವಿನಿಗರ್ಗೆ ಒಂದು ಭಾಗ ನೀರನ್ನು ಬೆರೆಸಿ,ಸ್ಪ್ರೇ ಮಾಡುವ ಬಾಟಲಿಯಲ್ಲಿ ಈ ಮಿಶ್ರಣವನ್ನು ತೆಗೆದುಕೊಂಡು ಸ್ನಾನಕ್ಕೆ ಐದು ನಿಮಿಶಗಳ ಮುನ್ನ ತಲೆ ಹಾಗೂ ಕೂದಲಿಗೆ ಚಿಮುಕಿಸಿಕೊಳ್ಳಿ. ನಿಮ್ಮಗೆ ವಿನಿಗರ್ನ ವಾಸನೆ ಹಿಡಿಸದೆ ಇದ್ದರೆ ನೀವು ಮಾಮೂಲಿ ಬಳಸುವ ಎಣ್ಣೆಯನ್ನು ಈ ಮಿಶ್ರಣಕ್ಕೆ ಬೆರೆಸಿಕೊಳ್ಳಬಹುದು. ಉತ್ತಮ ಫಲಿತಾಂಶಗಳಿಗಾಗಿ ವಾರಕ್ಕೆ ಎರಡು ಬಾರಿ ಈ ಮಿಶ್ರಣವನ್ನು ಬಳಸಿ.

ಆಲೂಗಡ್ಡೆಯ ರಸದಿಂದ ಕೂದಲ ರಕ್ಷಣೆ (Juice of potato for controlling hair fall)

ವಿಟಮಿನ್ ಹಾಗೂ ಲವನಗಳ ಕೊರತೆ ಕೂದಲು ಉದುರುವುದಕ್ಕೆ ಕಾರಣವಾಗಬಹುದು ಅಷ್ಟೇ ಅಲ್ಲದೆ ಕೂದಲು ಪೆಡಸು ಆಗಲು ಸಹ ಇದು ಕಾರಣವಾಗಬಹುದು. ಇಂತಹ ಸಮಯದಲ್ಲಿ ಆಲೂಗಡ್ಡೆ ನಿಮ್ಮ ಸಹಾಯಕ್ಕೆ ಬರುತ್ತದೆ. ಆಲೂಗಡ್ದೆಯಲ್ಲಿರುವ ವಿಟಮಿನ್ “B6”, ವಿಟಮಿನ್ “C”, ಮ್ಯಾಂಗನೀಸ್, ರಂಜಕ, ತಾಮ್ರ ಹಾಗೂ ನಿಯಾಸಿನ್ ಕೂದಲ ಬೆಳವಣಿಗೆಗೆ ಬಹಳ ಸಹಾಯಕಾರಿ. ಆಲೂಗಡ್ಡೆಯನ್ನು ಜಜ್ಜಿ ಅದರಲ್ಲಿನ ರಸವನ್ನು ತೆಗೆದುಕೊಳ್ಳಿ. ತೆಗೆದುಕೊಂಡ ರಸವನ್ನು ತಲೆಗೆ ಹಚ್ಚಿ ಮೂವತ್ತು ನಿಮಿಷಗಳಿಂದ ಒಂದು ಗಂಟೆ ಕಾಲ ಹಾಗೆಯೇ ಬಿಡಿ ಆದರೆ ಅದು ಒಣಗದಂತೆ ಜಾಗ್ರತೆ ವಹಿಸಿ. ನಂತರ ನೀರಿನಿದೊಂದಿಗೆ ತೊಳೆಯಿರಿ.

ದ್ರಾಕ್ಷಿ ಬೀಜದ ಎಣ್ಣೆಯಿಂದ ಕೂದಲ ರಕ್ಷಣೆ (Grape seed oil controls hair loss)

ದ್ರಾಕ್ಷಿ ಬೀಜದ ಎಣ್ಣೆ ಒಂದು ನೈಸರ್ಗಿಕ ಕಂಡೀಷನರ್ ಹಾಗೂ ಮಾಯಿಸ್ಟೂರೈಸರ್. ಕೂದಲು ಉದುರುವಿಕೆ, ತಲೆಹೊಟ್ಟು ಹಾಗೂ ಬಲಹೀನ ಕೂದಲಿಗೆ ಇದು ಒಳ್ಳೆ ಮದ್ದಾಗಿ ಕೆಲಸ ಮಾಡುತ್ತದೆ. ದ್ರಾಕ್ಷಿ ಬೀಜದ ಎಣ್ಣೆಯನ್ನು ದಿನವೂ, ನಿಯಮಿತವಾಗಿ ಬಳಸುವುದರಿಂದ ಆರೋಗ್ಯಾರವಾದ ಕೂದಲನ್ನು ಪಡೆಯಬಹುದು. ಅಷ್ಟೆಅಲ್ಲದೆ ಉತ್ಕರ್ಷಣ ವಿರೋಧಿ ಗುಣವಿರುವುದರಿಂದ ಕೂದಲ ಬುಡದಲ್ಲಿರುವ DHT ಪ್ರಮಾಣವನ್ನು ಸಹ ಕಾಪಾಡುತ್ತದೆ. ಕೂದಲು ಉದುರಲು DHT ಪ್ರಮಾಣ ಸಹ ಒಂದು ಪ್ರಮುಖ ಕಾರಣ. ಪ್ರತಿ ರಾತ್ರಿ ಮಲಗುವ ಮುನ್ನ ದ್ರಾಕ್ಷಿ ಬೀಜದ ಎಣ್ಣೆಯನ್ನು ನಿಯಮಿತವಾಗಿ ತಳ್ಗೆ ಹಚ್ಚಿ ಮಸಾಜ್ ಮಾಡಿಕೊಳ್ಳಬೇಕು. ಹಾಗೂ ಮರುದಿನ ಬೆಳ್ಳಿಗೆ ಸಾಬೂನಿನ ಸಹಾಯದಿಂದ ತೊಳೆದುಹಾಕಬೇಕು.

ಕುಸುಂಬೆ ಎಣ್ಣೆಯಿಂದ ಕೂದಲ ರಕ್ಷಣೆ (Safflower oil for hair fall)

ಕೂದಲ ಉದುರುವಿಕೆ ಹಾಗೂ ಬಕ್ಕ ತಲೆಯ ಸಮಸ್ಯೆಯನ್ನು ತಡೆಗಟ್ಟಲು ಕುಸುಂಬೆಯ ಎಣ್ಣೆ ಬಹಳ ಸಹಾಯಕಾರಿ. ಕುಸುಂಬೆ ಹೂವುಗಳ್ಲಲಿರುವ ಅಪರ್ಯಾಪ್ತ ಹಾಗೂ ಏಕಾಪರ್ಯಾಪ್ತ ಕೊಬ್ಬಿನ ಅಂಶ ಬಹಳ ಹೆಚ್ಚಾಗಿರುತ್ತದೆ ಆದ್ದರಿಂದ ಇವು ಕೂದಲ ರಕ್ಷಣೆಗೆ ಹೇಳಿಮಾಡಿಸಿದ ಎಣ್ಣೆ. ಮಾರುಕಟ್ಟೆಯಲ್ಲಿ ಎರಡು ಬಗೆಯ ಕುಸುಂಬೆ ಎಣ್ಣೆ ಸಿಗುತ್ತದೆ. ಎರಡನ್ನೂ ಸಹ ಬಳಸಬಹುದು. ಬನ್ಣಹಚ್ಚಿದ, ಒಣಗುದಲಿಗೂ ಸಹ ಕುಸುಬೆ ಎಣ್ಣೆಯನ್ನು ಬಳಸಬಹುದು. ರಾತ್ರಿ ಮಲಗುವ ಮುನ್ನ ಹಚ್ಚಿ ಬೆಳಿಗ್ಗೆ ತೊಳೆಯಬಹುದು. ಎರಡು ದಿನಗಳಿಗೊಮ್ಮೆ ಬಳಸುವುದರಿಂದ ಬಹಳ ಒಳ್ಳೆಯ ಫಲಿತಾಂಶ ಸಿಗುತ್ತದೆ.

ಗರಗಸ ತಾಳೆಮರ(saw palmetto) ಸಾರವನ್ನು ನಿತ್ಯದ ಆಹಾರದಲ್ಲಿ ಸೇವಿಸಿ (Add saw palmetto supplement to your diet)

ಪ್ರಪಂಚ ಖ್ಯಾತಿಯ ಒಂದು ನಿಯತಕಾಲಿಕೆ ಇತ್ತೀಚೆಗೆ ಗರಗಸ ತಲೆಮರದ ಔಷಧಿಯಿಂದ ಗಂಡಸರ ಕೂದಲ ಬೆಳವಣಿಗೆಗೆ ಪೂರಕ ಎಂದು ಕಂಡುಕೊಂಡಿದೆ. ಅವರು ನಡೆಸಿದ ಸಂಶೋಧನೆಯಲ್ಲಿ ಕಂಡುಕೊಂಡಿದ್ದೇನೆಂದರೆ ನಾನೂರು ಮಿಲಿಗ್ರಾಂ ಗರಗಸ ತಾಳೆಮರದ ಔಷಧಿಯನ್ನು ಸೇವಿಸಿದವರಲ್ಲಿ ಕೂದಲು ಬೆಳೆಯುವುದು ಹೆಚ್ಚಾಯಿತಂತೆ. ಐತಿಹಾಸಿಕವಾಗಿ ತಾಳೆಯನ್ನು ನಾಟಿ ಔಷಧಿ ನೀಡುವವರು ಗಂಡು ಹಾಗೂ ಹೆಣ್ಣುಗಳಲ್ಲಿ ಕೂದಲು ಬೆಳೆಸುವುದಕ್ಕೆ ನೀಡುತ್ತಿದ್ದರು.

ಥೈರಾಯ್ಡ್ ಗ್ರಂಥಿಯ ನಿಷ್ಕ್ರಿಯತೆಯಿಂದ ಉಂಟಾಗುವ ಕೂದಲ ಉದುರುವಿಕೆ (Under-active thyroid gland (hypothyroidism) can cause hair thinning)

ಕಡಲಜೊಂಡು, ಕಡಲಕಳೆ, ಕೊಂಬು(kombu) ಹಾಗೂ ವಕಾಮಿ(wakame)ಇತ್ಯಾದಿ ಐಯೊಡಿನ್ ಹೆಚ್ಚಾಗಿರುವ ತರಕಾರಿಗಳನ್ನು ನಿಮ್ಮ ದಿನ ನಿತ್ಯದ ಆಹಾರದಲ್ಲಿ ಬಳಸುವುದರಿಂದ ಥೈರಾಯ್ಡ್ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ ೧೦೦ ಎಂಜಿ ಅಥವಾ ಒಂದು ಎಮ್.ಎಲ್ herb Bladderwack(Focus vesiculosus) ಎಂಬ ಔಷಧಿಯನ್ನು ತೆಗೆದುಕೊಳ್ಳುವುದರಿಂದ ಥೈರಾಯ್ಡ್ ಕಾರ್ಯವನ್ನು ಸಕ್ರಮವಾಗಿಸಲು ಸಹಾಯಮಾಡುತ್ತದೆ. ನಿಮ್ಮಗೆ ಥೈರಾಯ್ಡ್ ತೊಂದರೆ ಇದೆ ಎಂದು ಅನಿಸಿದರೆ ಈ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳಿರಿ.

ಕೊಬ್ಬಿನಾಮ್ಲಗಳು (Get enough fatty acids)

ಆಹಾರದಲ್ಲಿ ಸರಿಯಾಗುವಷ್ಟು ಕೊಬ್ಬಿನಾಮ್ಲಗಳನ್ನು ನಿರ್ವಹಿಸುವುದರಿಂದ ಕೂದಲು ಉದುರುವುದನ್ನು ತಡೆಗಟ್ಟಿ ಕೂದಲ ಬೆಳವಣಿಗೆಯನ್ನು ಪ್ರೋತ್ಸಾಹಿಸಬಹುದು. ನೈಸರ್ಗಿಕವಾಗಿ ಕೊಬ್ಬಿನಾಮ್ಲಗಳನ್ನು ಹೊಂದಿರುವ ಆಕ್ರುಟ್, ಬಾದಾಮಿ ಹಾಗೂ ಇತರೆ ಬೀಜಗಳು, ಅಗಸೆ ಬೀಜ, ಮೀನು ಹಾಗೂ ಬೆಣ್ಣೆ ಹಣ್ಣನ್ನು ನಿತ್ಯವೂ ಆಹಾರದಲ್ಲಿ ಸೇವಿಸಬಹುದು. ಅಗಸೆ ಬೀಜಗಳನ್ನು ನಮ್ಮ ಅಡುಗೆಯಲ್ಲಿ ಬಳಸಬಹುದು. ಆದರೆ ಚೆನ್ನಾಗಿ ಅಗೆದು ತಿನ್ನಲು ಮರೆಯದಿರಿ. ರಾವ್ಸ ಅಥವಾ ಸೂರ್ಮೈ ಹಾಗೂ ಗೆದರೆ ಮೀನುಗಳು ಕೊಬ್ಬಿಣಾಮ್ಲಗಳನ್ನು ಹೆಚ್ಚಾಗಿ ಹೊಂದಿರುತ್ತವೆ.

ಬಯೊಟಿನ್ (Add biotin to your diet)

ಆರೋಗ್ಯವಬಂಟ ಕೂದಲಿನ ಅವಶ್ಯಕತೆಗಳಲ್ಲಿ ಬಯೊಟಿನ್ ಅತಿಮುಖ್ಯವಾದದ್ದು. ಬಯೋಟಿನ್ ನಮ್ಮ ದೇಹದಲ್ಲಿ ಕಡಿಮೆಯಾದರೆ ಕೂದಲು ಉದುರುವುದಕ್ಕೆ ಶುರುವಾಗುತ್ತದೆ. ಹಾಗಾಗಿ ಬಯೋಟಿನ್ಯುಕ್ತ ಆಹಾರಗಳನ್ನು ದಿನವೂ ಸೇವಿಸಬೇಕಾಗುತ್ತದೆ. ಮಾಂಸ, ಮೀನು, ಸೋಯಾಬೀಜಗಳು, ಮೊಟ್ಟೆ, ಹಾಲಿನ ಉತ್ಪನ್ನಗಳು, ಬೀಜಗಳು, ಹಸಿರು ತರಕಾರಿಗಳಾದ ಎಲೆಕೋಸು,ಕೆಲ್(kale), ಬ್ರಕೋಲಿ ಹಾಗೂ ಹೂಕೋಸನ್ನು ಮತ್ತು ಬೆಣ್ಣೆಹಣ್ಣು ಬಯೋಟಿನ್ ಹೊಂದಿರುವ ಕೆಲವು ಆಹಾರಗಳು. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ವಾರಗಳಲ್ಲೇ ನಿಮ್ಮಗೆ ಪರಿಣಾಮ ತಿಳಿಯುತ್ತದೆ.

ಎಂ.ಎಸ್.ಎಂ (Increase keratin production with methyl sulfonyl methane (MSM))

ಎಂ.ಎಸ್.ಎಂ (methyl sulfonyl methane) ಎಂಬ ಪೋಷಕಾಂಶ ಕೂದಲನ್ನು ಗಟ್ಟಿಮಾಡುವುದರಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಕೂದಲು ಉದುರುವಿಕೆ ಕಡಿಮೆಯಗುವುದನ್ನು ಇಟ್ತಿವ್ಹೆಗೆ ಒಂದು ಸಂಶೋಧನೆ ಧೃಡಪಡಿಸಿದೆ. ಹಾಲು, ಟೊಮ್ಯಾಟೋ ಹಾಗೂ ಜೊಳದಲ್ಲಿ ನೈಸರ್ಗಿಕವಾಗಿ ಎಂ ಎಸ್ ಎಂ ಹೆಚ್ಚಾಗಿರುತ್ತದೆ. ಆದ್ದರಿಂದ ಇವುಗಳ್ಳನ್ನು ನಿಯಮಿತವಾಗಿ ಸೇವಿಸಿ ಕೂದಲ ಸಮ್ಮಸ್ಯೆಗಳನ್ನು ಪರಿಹರಿಸಿಕೊಳ್ಳಿ.

ಬೀ-ಕಾಂಪ್ಲೆಕ್ಸ್ ನಿಂದ ಕೂದಲಕೊಶಕಗಳ ಪುನರುಜ್ಜೀವನ (Rejuvenate hair follicles with B-complex nutritional vitamins)

ದಿನಕ್ಕೆ ನೂರು ಮಿಲಿಗ್ರಾಂ ಬೀ ಕಾಂಪ್ಲೆಕ್ಸ್ ಸೇವಿಸುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ. ಅದರಲ್ಲಿರುವ ಬೀ6 ವಿಟಮಿನ್ ಹಾಗೂ ಬಯೋಟಿನ್ ಕೂದಲು ಉದುರುವುದನ್ನು ಕಡಿಮೆಮಾಡುತ್ತದೆ. ಹಾಗೂ ಕೂದಲ ಕೊಶಕಗಳನ್ನು ಆರೋಗ್ಯವಾಗಿ ಇಡುತ್ತದೆ. ಆದರೆ ಇದನ್ನು ಸೇವಿಸುವುದಕ್ಕೆ ಮೊದಲು ಒಮ್ಮೆ ನಿಮ್ಮ ವೈದ್ಯರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು.

ವಿಟಮಿನ್ ಸಿ ಇಂದ ಕಲಾಜೇನ್ ಮಟ್ಟ ಏರಿಸುವುದು (Increase collagen production with Vitamin C)

ಕೂದಲಲ್ಲಿರುವ ಒಂದು ಮುಖ್ಯ ಅಂಶವೆಂದರೆ ಕಲಾಜೇನ್. ಆದರೆ ವಯಸ್ಸಾಗುತ್ತಿದ್ದಂತೆ ಕಲಾಜೇನ್ ಮುರಿದುಬೀಳಲು ಶುರುವಾಗಬಹುದು ಇದರಿಂದ ಕೂದಲಿಗೆ ಹಾನಿಯಾಗುತ್ತದೆ. ಕಲಾಜೇನ್ ಮಟ್ಟವನ್ನು ಕಾಯ್ದುಕೊಳ್ಳಲು ಉತ್ತಮವಾದ ದಾರಿಯೆಂದರೆ ದಿನನಿತ್ಯದ ಆಹಾರದಲ್ಲಿ ಸೇವಿಸುವ ವಿಟಮಿನ್ ಸೀ ಪ್ರಮಾಣವನ್ನು ಏರಿಸುವುದು. ನಿಂಬೆ ಜಾತಿಯ ಹಣ್ಣುಗಳು, ಸ್ಟ್ರಾಬೆರ್ರಿಗಳು ಹಾಗೂ ಕೆಂಪು ಮೆಣಸಿನಲ್ಲಿ ಹೇರಳವಾಗಿ ದೊರೆಯುವ ವಿಟಮಿನ್ ಸೀಯನ್ನು ದಿನಕ್ಕೆ 250 ಮಿಲಿಗ್ರಾಂನಷ್ಟು ಸೇವಿಸಿದರೆ ಕೊಲಾಜೆನ್ನ ಮಟ್ಟವನ್ನು ಕಾಯ್ದುಕೊಳ್ಳಬಹುದು.

ವಿಟಮಿನ್ ಈ ಉತ್ಕರ್ಷಣ ನಿರೊಧಕಗಳನ್ನು ಬಳಸಿ ಕೂದಲನ್ನು ಕಾಪಾಡಿಕೊಳ್ಳುವುದು (Prevent the breakage with a vitamin E antioxidant)

ವಿಟಮಿನ್ ಈ ಮುರಿದ ಕೂದಲನ್ನು ಸರಿ ಮಾಡಿ ಅವುಗಳ ಆರೋಗ್ಯ ಕಾಪಾಡುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿನ ಕೆರಟಿನ್ ಉತ್ಪತ್ತಿಯನ್ನು ಹೆಚ್ಚುಮಾಡಿ ಕೂದಲು ಮುರಿಯುವುದರಿಂದ ತಡೆಯುತ್ತದೆ. ದಿನಕ್ಕೆ 400 ಐಯು(ಅಂತಾರಾಷ್ಟ್ರೀಯ ಮಾಪನ) ವಿಟಮಿನ್ ಈ ಉತ್ಕರ್ಷಣ ನಿರೊಧಕಗಳನ್ನು ನಮ್ಮ ನಿತ್ಯದ ಆಹಾರದಲ್ಲಿ ಸೇವಿಸುವುದರಿಂದ, ಉದ್ದದ ಹಾಗೂ ಚೆಂದದ ಕೂದಲು ನಿಮ್ಮದಾಗುತ್ತದೆ. ಆದರೆ ಯಾವುದೇ ಔಶಧಗಳನ್ನು ತೆಗೆದುಕೊಳ್ಳುವುದಕ್ಕೆ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆದು ಸೇವಿಸುವುದು ಒಳ್ಳೆದು.

ಕಬ್ಬಿಣದಂಶ ಹೆಚ್ಚಿರುವ ಆಹರಗಳನ್ನು ತಿನ್ನುವುದರಿಂದ ಕೂದಲು ಉದುರುವುದನ್ನು ನಿಲ್ಲಿಸಿ (Eat foods rich in iron to prevent hair loss)

ಕೂದಲಲ್ಲಿರುವ ಮುಖ್ಯವಾದ ಅಂಶಗಳಲ್ಲಿ ಕಬ್ಬಿಣ ಸಹ ಒಂದು. ದೇಹದಲ್ಲಿನ ಕಬ್ಬಿಣಾಂಶದ ಒರತೆಯಿಂದಲು ಕೂದಲು ಉದುರಲು ಶುರುವಾಗಬಹುದು. ಕಪ್ಪು ಕಾಕಂಬಿಯಲ್ಲಿ ಹೆಚ್ಚಾಗಿ ಸಿಗುವ ಕಬ್ಬಿಣ್ಣಾಂಶ ನಮ್ಮ ಕೂದಲ ಬೆಳವಣಿಗೆಗೆ ಬಹಳ ಸಹಾಯಕ. ಹಸಿರು ತರಕಾರಿ, ಈರುಳ್ಳಿ ಗಿಡ, ಗೋಡಂಬಿ ಹಾಗೂ ಇತರೆ ಒಣ ಹಣ್ಣುಗಳಲ್ಲಿ, ಅತ್ತಿ ಹಣ್ಣುಗಳಲ್ಲಿ ಹಾಗೂ ನೇರಳೆಯಂತಹ ಹಣ್ಣುಗಳಲ್ಲಿ ನಾವು ಕಬ್ಬಿಣ್ಣಾಂಶವನ್ನು ಪಡೆಯಬಹುದು. ಅಷ್ಟೇ ಅಲ್ಲದೆ ಕುರಿ ಹಾಗೂ ಕೊಳಿಯ ಮಾಂಸದಲ್ಲಿಯೂ ಕಬ್ಬಿಣ್ಣಾಂಶ ಅವಶ್ಯವಿರುವಷ್ಟು ದೊರೆಯುತ್ತದೆ. ಮೇಲಿನ ಆಹಾರಗಳನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹಕ್ಕೆ ಅವಶ್ಯವಾದ ಕಬ್ಬಿಣದಂಶ ದೊರೆಯುತ್ತದೆ. ಅಲ್ಲದೆ ವೈದ್ಯರ ಸಲಹೆ ಮೇರೆಗೆ ಕಬ್ಬಿಣದಂಶ ಹೆಚ್ಚಿಸುವ ಔಷಧಗಳನ್ನು ಸೇವಿಸಬಹುದು.

ನೆತ್ತಿಯ ರಕ್ತ ಪರಿಚಲನೆಯನ್ನು ವೃದ್ಧಿಸುವುದು (Boost scalp blood circulation with rosemary oil)

ರೋಸ್ಮೇರಿ ಎಣ್ಣೆಯನ್ನು ಬಳಸುವುದರಿಂದ ನೆತ್ತಿಯ ರಕ್ತ ಪರಿಚಲನೆ ಹೆಚ್ಚುತ್ತದೆ. ಕೊಬ್ಬರಿಎಣ್ಣೆಗೆ ಎರಡು ಮೂರು ಹನಿ ರೋಸ್ಮೆರಿ ಬೆರೆಸಿ ನಿಯಮಿತವಾಗಿ ಮಸಾಜ್ ಮಾಡುವುದರಿಂದ ಕೂದಲು ಉದುರುವುದರಿಂದ ತಡೆಯಬಹುದು.

ಕೂದಲಿಗೆ ಪೋಷಕಾಂಶಗಳನ್ನು ನೀಡಿ ಕೂದಲು ಉದುರುವುದನ್ನು ಪರಿಹರಿಸಿ (Give hair a nutrient boost to stop hair fall)

ಸಿಲಿಕಾ ಹಾಗೂ ಜ಼ಿಂಕ್ ಖನಿಜಗಳು ಕೂದಲು ಬೆಳೆಯುವಲ್ಲಿ ಹಾಗೂ ನೆತ್ತಿಯ ಅರೊಗ್ಯವನ್ನು ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ದೇಹಕ್ಕೆ ಅತಿ ಕಡಿಮೆ ಪ್ರಮಾಣದಲ್ಲಿ ಅವಶ್ಯವಿರುವ ಈ ಖನಿಜಗಳು ಅವ್ಶ್ಯಕಿಂತ ಕಡಿಮೆ ಪ್ರಮಾಣದಲ್ಲಿ ಇರುವಾಗ ಕೂದಲು ಉದುರುತ್ತದೆ. ಹುರುಳಿ, ಇತರೆ ಬೀಜಗಳು, ಸೌತೆಕಾಯಿ, ಮಾವು, ಅಜ್ಮೋದ, ಕುಂಬಳಕಾಯಿಯ ಬೀಜ, ಸಿಂಪಿ ಹಾಗೂ ಮೊಟ್ಟೆಗಳು ಈ ಖನಿಜಗಳನ್ನು ಹೆಚ್ಚಾಗಿ ಹೊಂದಿರುವ ತರಕಾರಿಗಳು. ಈ ತರಕಾರಿಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಕೂದಲ ಆರೋಗ್ಯವನ್ನು ಕಾಪಡಿಕೊಳ್ಳಬಹುದು. ಅವಶ್ಯವಿದ್ದಲ್ಲಿ, ವೈದ್ಯರನ್ನು ಸಂಪರ್ಕಿಸಿ 500 ಎಂ.ಜಿ ಸಿಲಿಕಾ ಹಾಗೂ 30 ಎಂ.ಜಿ ಜ಼ಿಂಕ್ ಮಾತ್ರೇಗಳನ್ನು ಸೇವಿಸಬಹುದು.

ನೆತ್ತಿಯ ರಕ್ತ ಪರಿಚಲನೆಯನ್ನು ವೃದ್ಧಿಸುವುದುಕ್ಕೆ ರೋಸ್ಮೆರಿ (Boost blood circulation in scalp with rosemary oil)

ರೋಸ್ಮೇರಿ ಎಣ್ಣೆಯನ್ನು ಬಳಸುವುದರಿಂದ ನೆತ್ತಿಯ ರಕ್ತ ಪರಿಚಲನೆ ಹೆಚ್ಚುತ್ತದೆ. ಕೊಬ್ಬರಿಎಣ್ಣೆ, ಬಾದಾಮಿ ಅಥವಾ ಆಲಿವ್ ಎಣ್ಣೆಗೆ ಎರಡು ಮೂರು ಹನಿ ರೋಸ್ಮೆರಿ ಬೆರೆಸಿ ನಿಯಮಿತವಾಗಿ ಮಸಾಜ್ ಮಾಡುವುದರಿಂದ ಕೂದಲು ಉದುರುವುದರಿಂದ ತಡೆಯಬಹುದು.

ಕೂದಲು ಉದುರುವುದಕ್ಕೆ ಮುಖ್ಯ ಕಾರಣಗಳು ( Causes of hair fall)

ಒತ್ತಡ (Stress)

ಕೂದಲು ಉದುರುವುದಕ್ಕೆ ಬಾಹ್ಯ ಕಾರಣಗಳಲ್ಲಿ ಒತ್ತಡ ಪ್ರಮುಖವಾದದ್ದು. ಒತ್ತಡದಿಂದ ಕೂದಲು ಉದುರುವುದು ಮೂರು ವಿಧಗಳು: ಟ್ರಿಕೋಟಿಲ್ಲೋಮೇನಿಯಾ, ಅಲೋಪೇಸಿಯ ಅರಿಯೆಟ ಹಾಗೂ ಟೇಲೋಜೆನ್ ಎಫ್ಲುವಿಯಂ. ಒತ್ತಡದಿಂದ ಉಂಟಾಗುವ ಕೇಶ ನಷ್ಟ ಶಾಶ್ವಾತವಲ್ಲದಿದ್ದರು, ಯೋಗ ಹಾಗೂ ಧ್ಯಾನವನ್ನು ಮಾಡುವುದರಿಂದ ಅಥವಾ ದೈಹಿಕ ವ್ಯಾಯಾಮ ಮಾಡುವುದರಿಂದ ಕಡಿಮೆ ಮಾಡಿಕೊಳ್ಳಬಹುದು.

ಸೋಂಕು ಅಥವಾ ಶಿಲೀಂಧ್ರವಾಹಕಗಳಿಂದ ಬರುವ ಕೇಶನಷ್ಟ (Infections or fungal diseases)

ಸೋಂಕು ಅಥವಾ ಶಿಲೀಂಧ್ರವಾಹಕಗಳಿಂದಳು ಸಹ ಕೂದಲು ಉದುರುವುದಕ್ಕೆ ಶುರುವಾಗಬಹುದು. ರಿಂಗ್ ವರ್ಮ್ ನಂತಹ ಶಿಲೀಂಧ್ರಕಾರಕ ಸೋಂಕುಗಳಿಂದ ಕೂದಲು ಹೆಚ್ಚಾಗಿ ಉದುರುತ್ತದೆ ಹಾಗೂ ಬೋಳು ತೇಪೆಗಳು ಬರುತ್ತವೆ. ಕೆಲವು ಸೊನ್ಕುಗಳನ್ನು ನೈಸರ್ಗಿಕವಾಗಿ ಕಡಿಮೆಯಾಗುವುದಾದರು, ಕಾರಣವನ್ನು ಪತ್ತೆ ಹಚ್ಚಿ ಅವಶ್ಯವಾದ ನಿವರಣೆಯನ್ನು ಬಳಸುವುದರಿಂದ ಕೂದಲು ಉದುರುವುದನ್ನು ತಪ್ಪಿಸಬಹುದು.

ವಂಶವಾಹಿ (Heredity)

ಕೂದಲು ಉದುರುವುದಕ್ಕೆ ಪ್ರಾಥಮಿಕ ಕಾರಣವೆಂದು ವಂಶವಾಹಿಗಳನ್ನು ಕರೆಯಬಹುದು. ನಿಮ್ಮ ಹಿರಿಯರಲ್ಲಿಯೂ ಸಹ ಕೂದಲು ಉದುರುವ ಪರಿಪಾಠವಿದ್ದರೆ ಬಹುಶಃ ಅದನ್ನು ತಡೆಯುವುದು ಸಾಧ್ಯವಾಗದೆ ಹೋಗಬಹುದು. ಅನ್ಡ್ರೊಜೆನೆಟಿಕ್ ಅಲೋಪೇಶಿಯ ಎಂದು ಕರೆಯುವ ಈ ಪರಿಸ್ತಿತಿ ಹೆಂಗಸರಲ್ಲಿ ಕಡಿಮೆಇರಲು ಅವರ ವಂಶವಾಹಿಗಳ ಗುಣದಿಂದ ಸಾಧ್ಯವಾಗಿದೆ. ಆದರೆ ಹೆಂಗಸರಿಗೂ ಕೂದಲು ತೆಳುವಾಗುವ ಹಾಗೂ ಬೋಳು ತೆಪೆಗಳು ಸ್ವಲ್ಪ ಮಟ್ಟಿಗೆ ಕಾಣಿಸಿಕೊಳ್ಳಬಹುದು.

ಪೋಷಕಾಂಶಗಳ ಕೊರತೆ (Insufficiency of nutrients)

ನಿಮ್ಮಲ್ಲಿ ವಿಟಮಿನ್ ಅಥವಾ ಖನಿಜಗಳ ಕೊರತೆ ಇದ್ದರೆ, ಅದೇ ಕಾರಣಕ್ಕೆ ನಿಮ್ಮ ಕೂದಲು ಉದುರುತಿರಬಹುದು. ಸಸಾರಜನಕವು ಸಹ ಕೂದಲ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ, ಆದ್ದರಿಂದ ಪೋಷಕಾಂಶಯುಕ್ತ ಆಹಾರಾಭ್ಯಾಸವನ್ನು ರೂಡಿಸಿಕೊಳ್ಳಿ. ವಿಟಮಿನ್, ಸಸಾರಜನಕ ಹಾಕು ಖನಿಜಗಳು ಹೆಚ್ಚಾಗಿ ಇರುವ ಆಹರಗಳನ್ನು ಸೇವಿಸಿ.

ಪಿ. ಸಿ. ಓ. ಎಸ್ – ಪಾಲಿಸಿಸ್ಟಿಕ್ ಓವಾಯರಿಯನ್ ಸಿಂಡ್ರೋಮ್ (PCOS (Polycystic ovarian syndrome))

ಬಹಳಷ್ಟು ಹೆಂಗಸರಲ್ಲಿ ಪಿ. ಸಿ. ಓ. ಎಸ್ ಕಾರಣಕ್ಕಾಗಿ ಕೂದಲು ಉದುರುವುದಕ್ಕೆ ಮೊದಲಾಗುತ್ತದೆ. ಬೊಜ್ಜು, ಅನಾರೋಗ್ಯಕರ ಜೀವನಶೈಲಿ, ಅಥವಾ ಹಾರ್ಮೋನ್ಗಳ ಅಸಮತೋಲನದಿಂದ ಈ ರೋಗಲಕ್ಷಣ ಕಾಣಿಸಿಕೊಳ್ಳಬಹುದು. ಈ ಲಕ್ಷಣದ ಕಾರಣದಿಂದ ಲಯಬದ್ದವಲ್ಲದ ಮುಟ್ಟಿನ ಸಮಸ್ಯೆ ಹಾಗೂ ಅತಿಹೆಚ್ಚು ಕೂದಲು ಉದುರುವುದು ಇತ್ಯಾದಿ ಸಮಸ್ಯೆಗಳು ಬರಬಹುದು. ಇದನ್ನು ಪರಿಹರಿಸಲು ವೈದ್ಯಕೀಯ ಸಹಾಯ ಅವಶ್ಯವಾಗಿ ಬೇಕು.

ಗರ್ಭಧಾರಣೆ (Pregnancy)

ಗರ್ಭವತಿಯಾಗಿರುವ ಕಾಲದಲ್ಲಿ ಅತಿಹೆಚ್ಚು ಕೂದಲು ಉದುರುವಿಕೆಯನ್ನು ಹೆಂಗಸರು ಅನುಭವಿಸಬಹುದು. ಇದಕ್ಕೆ ಕಾರಣ ಗರ್ಭಧಾರಣೆ ಸಮಯದಲ್ಲಿ ತಾಯಿಯ ದೇಹದಲ್ಲಿ ಉಂಟಾಗುವ ಹರ್ಮೋನ್ ಅಸಮತೋಲನ. ಆದರೆ ಮಗುವಿನ ಜನನದ ನಂತರ ಈ ಸಮಸ್ಯೆ ಇಲ್ಲವಾಗುತ್ತದೆ.

ಶೈಲಿಕಾರಕ ಯಂತ್ರಗಳ ಬಳಕೆ ಹಾಗೂ ಪ್ರಸಾದನ ರಾಸಾಯನಿಕಗಳ ಬಳಕೆ (Use of styling tools and chemicals)

ಬಹಳ ಜನರು ಕೂದಲು ನೀಟಾರಾಗಿರಿಸುವುದಕ್ಕೆ ಉಡಲು ಬಿಸಿಮಾಡುವ ಯಂತ್ರಗಳನ್ನು ಬಳಸುತ್ತಾರೆ. ಅಷ್ಟೆಅಲ್ಲದೆ ರಸಯಾನಿಕಗಳಿಂದ ತುಂಬಿದ ಸ್ಪ್ರೇಗಳನ್ನು ಅನೇಕ ವಿಧಧ ಕೇಶ ಶೈಲಿ ಮಾಡಿಕೊಳ್ಳಲು ಬಳಸುವುದರಿಂದ ಕೂದಲು ಉದುರುತ್ತದೆ ಅಷ್ಟೇ ಅಲ್ಲದೆ ಕೂದಲು ಸಹ ಹೊಳಪು ಕಳೆದುಕೊಳ್ಳುತ್ತದೆ ಹಾಗೂ ಕೆಲವೊಮ್ಮೆ ಹಾನಿಯಾಗುತ್ತದೆ. ಬಿಗಿಯಾದ ಕೇಶವಿನ್ಯಾಸಗಳು ಸಹ ಕೂದಲಿಗೆ ಹಾನಿಮಾಡಬಹುದು.

ಕೂದಲು ಉದುರುವಂತೆ ಮಾಡುವ ಔಷಧಗಳು (Medications for hair loss)

ಕೆಲವೊಮ್ಮೆ ನಾವು ಬೇರೆ ಸೋಂಕು ಅಥವಾ ಹಾರ್ಮೋನ್ ಸಂಭಂಧಿ ರೋಗಗಳಿಗೆ ತೆಗೆದುಕೊಳ್ಳುವ ಔಷಧಗಳು ಸಹ ಕೂದಲು ಉದುರುವಂತೆ ಮಾಡಬಹುದು. ಹೆಚ್ಚು ಕೂದಲು ಉದುರುವುದಕ್ಕೆ ಶುರುವಾದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಔಷದಿಗಳನ್ನು ಬದಲಾಯಿಸಿ ಬಳಸಬಹುದು.

ಅಷ್ಟೇ ಅಲ್ಲದೆ, ಅತಿಯಾಗಿ ಬಿಸಿಲಿಗೆ ಒಡ್ಡೀಕೊಳ್ಳುವುದು, ಮದ್ಯಸೇವನೆ ಹಾಗೂ ಧೂಮಪಾನದಿಂದ ಸಹ ಕೂದಲು ಉದುರಬಹುದು.

ಕೂದಲು ಉದುರುವುದನ್ನು ತಡೆಯಲು ಕೆಲವು ಮುಖ್ಯ ಸಲಹೆಗಳು (Some vital tips for hair fall control and hair growth)

  • ಕೂದಲು ಹಾಗೂ ತಲೆಯನ್ನು ಸ್ವಚ್ಚವಾಗಿರಿಸಿಕೊಳ್ಳಿ. ಮಲಿನವಾದ ತಲೆ ಹಾಗೂ ಕೂದಲು, ಉದುರುವುದಕ್ಕೆ ಹೆಚ್ಚು ಅವಕಾಶ ಮಾಡಿಕೊಡುತ್ತದೆ. ಆದ್ದರಿಂದ ನಿತ್ಯವೂ ತಲೆ ಸ್ನಾನಮಾಡಿ, ದಿಂಬು ಹಾಗೂ ಚೌಕಗಳನ್ನು ನಿಯಮಿತವಾಗಿ ಒಗೆಯಿರಿ ಹಾಗೂ ಸದಾ ಸ್ವಚ್ಛವಾಗಿ ಇರಿಸಿಕೊಳ್ಳಿ. ಹಾಗೂ ಮಲಿನವಾದ ಕೈಗಳಿಂದ ಕೂದಲನ್ನು ಮುಟ್ಟುವುದು ಮಾಡಬೇಡಿ. ನಿಮ್ಮ ಬಾಚಣಿಕೆಗಳನ್ನು ದಿನವೂ ತೊಳೆದು ಇರಿಸಿ. ಅವುಗಳಿಂದ ಸೋಂಕು ಬರುವುದು ತಪ್ಪುತ್ತದೆ.
  • ಬೇಸಿಗೆ ಬಂದೊಡನೆಯೇ ನಿಮ್ಮ ಕೂದಲು ಹೆಚ್ಚಾಗಿ ಉದುರುತಿದೆಯೆ? ಹಾಗಾದರೆ ಇದು ಬೆವರಿನಿಂದ ಉಂಟಾದ ಸಮಸ್ಯೆ. ಬೇಸಿಗೆಯಲ್ಲಿ ಹೆಚ್ಚುವ ಬಿಸಿಯನ್ನು ತಡೆಯಲು ದೇಹ ಹೆಚುಹೆಚ್ಚು ಬೆವರುತ್ತದೆ. ಹಾಗಾಗಿ ಕೂದಲು ಉದುರುವುದು ಮೊದಲಾಗುತ್ತದೆ. ನಿರಂತರವಾಗಿ ಹೆಚ್ಚು ಹೀರಿಕೊಳ್ಳುವ ಹತ್ತಿ ಟವಲ್ನಿಂದ ತಲೆಯನ್ನು ಒರೆಸುತ್ತಲಿರಿ ಹಾಗೂ ದಿನಕ್ಕೆ ಒಮ್ಮೆಯಾದರೂ ತಂಪಾದ ನೀರಿನಲ್ಲಿ ತಲೆಸ್ನಾನ ಮಾಡಿ. ಇದರಿಂದ ಕೂದಲು ಉದುರುವುದನ್ನು ತಡೆಯಬಹುದು.
  • ಕೂದಲು ಉದುರುವುದಕ್ಕೆ ಬಿಸಿಲು ಸಹ ಒಂದು ಕಾರಣವಾಗಬಹುದು. ಬಿಸಿಲಿಗೆ ಒಣಗಿ ಸೊರಗುವ ಕೂದಲು ಪೆಡಸಾಗಬಹುದು. ಇದರಿಂದ ಕಾಪಾಡಿಕೊಳ್ಳಲು ಇರುವ ಒಂದು ಮಾರ್ಗವೆಂದರೆ ತಲೆಯನ್ನು ನೇರವಾಗಿ ಬಿಸಿಲಿಗೆ ಒಡ್ಡಿಕೊಳ್ಳದೆ ಇರುವುದು. ಟೋಪಿ ಹಾಕಿಕೊಳ್ಳುವುದು , ರುಮಾಲು ಸುತ್ತಿಕೊಳ್ಳುವುದು ಅಥವಾ ಛತ್ರಿಯನ್ನು ಬಳಸುವುದರಿಂದ ಕೂದಲಿಗೆ ಬಿಸಿಲಿನಿಂದ ಸ್ವಲ್ಪ ಬಾಹಿಕ ರಕ್ಷಣೆ ದೊರೆಯುತ್ತದೆ.
  • ರಾಸಾಯನಿಕ ಶ್ಯಾಂಪೂ ಹಾಗೂ ಕಂಡೀಶನರ್ ಬಳಸುವುದರಿಂದಳು ಸಹ ಕೂದಲು ಉದುರುವುದಕ್ಕೆ ಕಾರಣವಾಗಬಹುದು. ಭಾರತದಲ್ಲಿ ದೊರೆಯುವ ಬಹಳಷ್ಟು ಶ್ಯಾಂಪೂಗಳಲ್ಲಿ ಎಸ್. ಎಲ್. ಎಸ್ ಅಥವಾ ಎಸ್. ಎಲ್. ಈ ರಸಾಯನಿಕಗಳಿರುವುದರಿಂದ ಬಳಕೆಯ ನಂತರ ಕೂದಲ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಇವನ್ನೂ ನಿರಂತರವಾಗಿ ಬಳಸುವುದರಿಂದ ಕೂದಲು ಪೆಡಸಾಗಿ ಹಾನಿಗೆ ಒಳಗಾಗಬಹುದು. ಹಾಗಾಗಿ ಕೂದಲು ಉದುರುವುದನ್ನು ತಡೆಯಲು ಮನೆಯಲ್ಲೇ ತಯಾರಿಸಿದ ಸಾಬೂನು ಹಾಗೂ ಕೇಶ ರಕ್ಷಕಗಳನ್ನು ಬಳಸುವುದು ಓಳಿತು.
error: Content is protected !!