Tips to reduce body heat, foods & drinks to control your body heat in Kannada language – ದೇಹತಾಪವನ್ನು ಕಡಿಮೆಮಾಡಲು ಸುಲಭ ಸೂತ್ರಗಳು. ತಂಪುದಾಯಕ ಆಹಾರ ಹಾಗೂ ಪಾನೀಯಗಳು

ದೇಹದ ಉಷ್ಣತೆ ಹತ್ತು ಹಲವು ಕಾರಣಗಳಿಂದ ಉಂಟಾಗುತ್ತದೆ. ಇವುಗಳಲ್ಲಿ ಮುಖ್ಹ್ಯವಾದದ್ದು ಪರಿಸರದಲ್ಲಿನ ಉಷ್ಣತೆ. ನಮ್ಮ ದೇಹದ ಸುತ್ತಲ್ಲಿನ ಪರಿಸರದಲ್ಲಿ ಉಷ್ಣತೆನಮ್ಮ ದೇಹದ ಉಷ್ಣತೆಯ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಉದಾಹರಣೆಗೆ ಬೇಸಗೆಯಲ್ಲಿ ಹೆಚ್ಚಾಗುವ ಸೂರ್ಯನ ತಾಪ, ನಮ್ಮ ದೇಹದ ತಾಪಮಾನವನ್ನು ಹೆಚ್ಚುಮಾಡುತ್ತದೆ. ಬಿಸಿಲೊಂದೇ ಅಲ್ಲದೆ ನಾವು ಸೇವಿಸುವ ಆಹಾರವು ಸಹ ನಮ್ಮ ದೇಹದ ಉಷ್ಣತೆಯನ್ನು ನಿರ್ಧರಿಸುತ್ತದೆ. ಅತಿಯಾದ ಖಾರವಾದ ಪಾದಾರ್ತಗಳು, ಮದ್ಯ ಹಾಗೂ ಕೆಫೈನ್ ಇತ್ಯಾದಿಗಳ ಸೇವನೆಯಿಂದಲೂ ದೇಹದ ತಾಪಮಾನವೇರುತ್ತದೆ.

ಕೆಲವೊಮ್ಮೆ ಅನಾರೋಗ್ಯ ಹಾಗೂ ನಾವು ಸೇವಿಸುವ ಔಷಧಿಗಳು ಸಹ ದೇಹದ ತಾಪಮಾನವನ್ನು ಏರುಪೇರುಮಾಡುತ್ತವೆ. ನೈಸರ್ಗಿಕವಾಗಿ ನಮಗೆ ಲಭ್ಯವಿರುವ ಕೆಲವು ಮೂಲಿಕೆ ಹಾಗೂ ಮನೆ ಮದ್ದುಗಳ ಸಹಾಯದಿಂದ ನಾವು ನಮ್ಮ ದೇಹದ ತಾಪಮಾನವನ್ನು ಸಮತೋಲನದಲ್ಲಿ ಇರಿಸಿಕೊಳ್ಳಬಹುದು.

ಮಾನವ ದೇಹದ ಸಾಮಾನ್ಯ ಉಷ್ಣತೆ 36.9 ಸೆಲ್ಶಿಯಸ್ ಇರುತ್ತದೆ. ಈ ಸಂಖ್ಯೆಯಿಂದ ಒಂದೇರಡು ಅಂಕಿ ಹೆಚ್ಚುಕಡಿಮೇ ಆದರೂ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಅದಕ್ಕಿಂತ ಹೆಚ್ಚು ಅಥವಾ ಕಡಿಮೆ ಆದಾಗ ದೇಹವು ತನ್ನ ಅಂತರಿಕ ಉಷ್ಣತೆಯನ್ನು ಕಾಪಾಡಿ ಕೊಳ್ಳಲು ಪ್ರಯತ್ನಿಸುತ್ತದೆ. ಆದರೆ ಬಾಹ್ಹಿಕ ತಾಪಮಾನವು ಅತಿಯಾಗಿ ಏರುಪೇರಾದಾಗ ದೇಹವು ಅದಕ್ಕೆ ಒಗ್ಗಿಕೊಳ್ಳದೆ ಹೋಗಬಹುದು ಹಾಗೂ ಅಂತಹ ಏರುಪೆರುಗಳು ಆರೋಗ್ಯಕ್ಕೆ ಮಾರಕವಾಗಬಹುದು. ಅಂತಹ ಪರಿಸ್ತಿತಿಗಳಲ್ಲಿ ನಮಗೆ ಕೆಲವು ಆಹಾರ ಹಾಗೂ ಪಾನೀಯಗಳು ಸಹಾಯಕ್ಕೆ ಬರುತ್ತವೆ.

ದೇಹದ ಉಷ್ಣತೆ ಏರುವುದಕ್ಕೆ ಕಾರಣಗಳು (Reasons for body heat)

 • ಕೃತಕ ಅಥವಾ ಬಿಗಿಯಾದ ಬಟ್ಟೇಗಳನ್ನು ಧರಿಸುವುದು.
 • ಜ್ವರ ಅಥವಾ ಸೋಂಕು ತಗಲುವುದು.
 • ಥೈರಾಯಿಡ್ ಗ್ರಂಥಿಗಳ ಅತಿಯಾದ ಚಟುವಟಿಕೆಯಿಂದ ಉಂಟಾಗುವ ದೈಹಿಕ ಉಷ್ಣತೆ.
 • ಆಯಾಸಕಾರಿಯಾದ ವ್ಯಾಯಾಮ ಅಥವಾ ಚಟುವಟಿಕೆ.
 • ಅಫೆಟಮಿನ್ ಅಥವಾ ಕೆಲವು ಉದ್ದೀಪನಾ ಮದ್ದುಗಳ ಸೇವನೆ.
 • ನರಗಳ ದೌರ್ಬಲ್ಯದಿಂದ ಉಂಟಾಗುವ ದೈಹಿಕ ಉಷ್ಣತೆ.
 • ಸೋರಿಯಸಿಸ್, ಸಿಸ್ಟೆಮಿಕ್ ಸ್ಲೆರೋಸಿಸ್, ಸೈಸ್ಟಿಕ್ ಫಿಬ್ರೋಸಿಸ್ ಅಥವಾ ಎಕ್ಸೆಮ(ಕಜ್ಜಿ) ಮುಂತಾದ .ರೋಗಗಳ ಕಾರಣದಿಂದ ಬೆವರುವ ಸಾಮಾರ್ಥ್ಯ ಕಡಿಮೆಯಾದಾಗ ನಮ್ಮ ದೇಹದ ಉಷ್ಣತೆ ಏರುತ್ತದೆ.
 • ಅತಿಯಾದ ಬಿಸಿಲಿಗೆ ನಮ್ಮನು ನಾವು ಒಡ್ಡಿಕೊಳ್ಳುವುದರಿಂದಲು ದೇಹದ ತಾಪವೇರಬಹುದು.

ಉಷ್ಣತೆಯನ್ನು ಕಡಿಮೆ ಮಾಡುವುದು ಹೇಗೆ? (How to remove heat from the body)

 • ಖಾರಹೆಚ್ಚಿರುವ ಪದಾರ್ಥಾಗಳನ್ನು ಸೇವಿಸದಿರುವುದು.
 • ಕೊಬ್ಬು ಹೆಚ್ಚಿರುವ ಅಥವಾ ಕರಿದ ಪದಾರ್ಥಗಳನ್ನು ಸೇವಿಸದಿರುವುದು.
 • ಕೆಫೈನ್ ಹಾಗೂ ಮದ್ಯ ಸೇವಿಸದಿರುವುದು.
 • ಸೋಡಿಯಂ ಅಂಶ ಕಡಿಮೆ ಇರುವ ಪದಾರ್ಥಗಳ ಸೇವನೆ.
 • ಬಾದಾಮಿ, ಎಳ್ಳು ಅಥವಾ ಜೋಳದ ಎಣ್ಣೆಯ ಬದಲಾಗಿ ಕೊಬ್ಬರಿ ಅಥವಾ ಆಲಿವ್ ಎಣ್ಣೆಯನ್ನು ಬಳಸುವುದು.
 • ಆಹಾರದಲ್ಲಿನ ಕಾಳು ಹಾಗೂ ಧಾನ್ಯಗಳನ್ನು ಕಡಿಮೆ ಮಾಡಿ, ವಾರಕ್ಕೆ 2-3 ಬಾರಿ ಮಾತ್ರ ಸೇವಿಸುವುದು.
 • – ಸಸ್ಯಾಹಾರ ಸೇವನೆಯನ್ನು ಹೆಚ್ಚಿಸಿ, ಮಾಂಸಾಹಾರವನ್ನು ಕಡಿಮೆ ಮಾಡುವುದು.

ದೇಹದ ತಾಪಮಾನವನ್ನು ಆರೋಗ್ಯವಾಗಿರಿಸಲು ಮನೆ ಮದ್ದು (Home remedies for reducing body heat)

ದಾಳಿಂಬೆ ರಸ (Pomegranate juice)

ಪ್ರತಿದಿನ ಬೆಳಿಗ್ಗೆ ಒಂದು ಲೋಟ ದಾಳಿಂಬೆ ರಸಕ್ಕೆ ಎರಡು ಮೂರು ಹನಿ ಬಾದಾಮಿ ಎಣ್ಣೆಯನ್ನು ಸೇರಿಸಿ ಸೇವಿಸುವುದರಿಂದ ಸುಲಭವಾಗಿ ದೇಹದ ತಾಪಮಾನವನ್ನು ಕಾಯ್ದುಕೊಳ್ಳಬಹುದು. ಈ ಪದ್ದತಿಯು ಎಲ್ಲಾ ವಯೋಮಾನದವರಿಗೂ ಅನುಕೂಲಕರವಾಗಿದ್ದು. ಎಲ್ಲರೂ ಅನುಸರಿಸಬಹುದು.

ನೀರು (Water to control body heat)

ದೇಹದ ಉಷ್ಣತೆಯ ನಿಯಂತ್ರಣ ಎಂದ ಕೂಡಲೇ ನಮಗೆ ನೆನಪಾಗಬೇಕಾದ ಪಾನೀಯವೆಂದರೆ ನೀರು. ಒಂದು ಪಾತ್ರೆಯಲ್ಲಿ ತಣ್ಣನೆಯ ನೀರನ್ನು ತೆಗೆದುಕೊಂಡು ಅದರಲ್ಲಿ ನಿಮ್ಮ ಪಾದಗಳನ್ನು ಮುಳುಗಿಸಿ ಇಡುವುದರಿಂದ ದೇಹದ ತಾಪಮಾನ ಕಡಿಮೆಯಾಗುತ್ತದೆ.

ಗಸಗಸೆ (Poppy seeds to control body heat)

ನಿತ್ಯ ಮಲಗುವ ಮುನ್ನ ಒಂದು ಹಿಡಿ ಗಸಗಸೆಯನ್ನು ಜಗಿದು ತಿಂದರೆ ದೇಹದ ತಾಪಮಾನ ಹತೊಟಿಯಲ್ಲಿರುವುದಲ್ಲದೆ ಚೆನ್ನಾಗಿ ನಿದ್ದೆಯೂ ಸಹ ಬರುತ್ತದೆ. ಆದರೆ ನೆನಪಿಡಿ, ಗಸಗಸೆಯಲ್ಲಿ ಅಫೀಮಿನ ಅಂಶವಿರುವುದರಿಂದ ಮಕ್ಕಳಿಗೆ ಇದನ್ನು ನೀಡಬಾರದು ಹಾಗೂ ವಯಸ್ಕರು ಸಹ ಮಿತವಾಗಿ ಸೇವಿಸಬೇಕು.

ಮೆಂತ್ಯ (Fenugreek seeds)

ನಮ್ಮ ಅಡುಗೆಮನೆಯಲ್ಲಿರುವ ಅನೇಕ ಪದಾರ್ಥಗಳಲ್ಲಿ ಔಷಧೀಯ ಗುಣಗಳಿರುವಂತೆ, ಮೆಂತ್ಯೆಯು ಸಹ ದೇಹದ ಉಷ್ಣತೆಯನ್ನು ಸಮತೋಲನದಲ್ಲಿರಿಸಲು ಸಹಾಯಕವಾಗಿದೆ. ಕೇವಲ ಒಂದು ಚಮಚೆಯಷ್ಟು ಮೆಂತ್ಯೆಯನ್ನು ಹಸಿಯಾಗಿ ಸೇವಿಸುವುದರಿಂದ ದೇಹದ ತಾಪಮಾನವನ್ನು ಸಮತೋಲನದಲ್ಲಿರಿಸಬಹುದು.

ಹಾಲು- ಜೇನು (Honey and milk)

ಜೇನು ಹಾಗೂ ಹಾಲನ್ನು ಬೆರೆಸಿ ಮಾಡಿದ ಪಾನೀಯ ದೇಹಾದ್ ಉಷ್ಣತೆಯನ್ನು ಸಮತೊಲನದಲ್ಲಿಡಲು ಸಂಜೀವಿನಿಯಂತಹ ಮದ್ದಾಗಿರುತ್ತದೆ. ಒಂದು ಲೋಟ ಹಾಲಿಗೆ ಒಂದು ಚಮಚ ಜೇನು ತುಪ್ಪವನ್ನು ಬೆರೆಸಿ ದಿನವೂ ಸೇವಿಸಿದರೆಉತ್ತಮ ಫಲಿತಾಂಶವನ್ನು ಕಾಣಬಹುದಾಗಿದೆ.

ಶ್ರೀಗಂಧ (Sandalwood and water for body heat control)

ಶ್ರೀಗಂಧಕ್ಕೆ ಸ್ವಲ್ಪ ನೀರು ಅಥವಾ ಹಾಲನ್ನು ಬೆರೆಸಿ ಲೇಹ್ಯದಂತೆ ಮಾಡಿ ಹಣೆ ಹಾಗೂ ಗಲ್ಲಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮವು ತಂಪಾಗಿ ದೇಹವು ತಂಪಾಗುತ್ತದ್ದೆ. ಲೇಹ್ಯವನ್ನು ಮಾಡುವಾಗ ನೀರಿಗೆ ಬದಲಾಗಿ ಪನ್ನೀರನ್ನು ಬಳಸಿದರೆ ಫಲಿತಾಂಶ ಹೆಚ್ಚುತ್ತದೆ.

ಬೆಣ್ಣೆ ಹಾಗೂ ಹಾಲು (Butter and milk remedy)

ಲೋಟ ಹಾಲಿಗೆ ಏರಡು ಚಮಚೆಯಷ್ಟು ಬೆಣ್ಣೆಯನ್ನು ಬೆರೆಸಿ ಸೇವಿಸುವುದರಿಂದ ದೇಹದ ಉಷ್ಣತೆಯನ್ನು ಅಣತಿಯಲ್ಲಿಡಬಹುದು ಆದರೆ ಬೊಜ್ಜಿನ ಸಮಸ್ಯೆ ಇರುವವರು ಈ ವಿಧಾನವನ್ನು ಅನುಸರಿಸಬಾರದು.

“ಸಿ” ಜೀವಸತ್ವ (Vitamin C rich vegetables)

“ಸಿ” ಜೀವಸತ್ವವು ಹೆಚ್ಚಿರುವ ತರಕಾರಿ ಹಾಗೂ ಹಣ್ಣುಗಳ ಸೇವನೆ ದೇಹದ ಉಷ್ಣತೆಯನ್ನು ಮಿತಿಯಲ್ಲಿಡಲು ಸಹಕರಿಸುತ್ತವೆ. ಬೇಸಿಗೆಯ ಬೇಗೆಯಿಂದ ಹೆಚ್ಚುವ ದೇಹದ ಆಂತರಿಕ ಹಾಗೂ ಬಾಹಿಕ ತಾಪಮಾನವನ್ನು ಹತೊಟಿಯಲ್ಲಿಡಲು”ಸಿ” ಜೀವಸತ್ವವು ಸಹಾಯಕಾರಿ.

ದೇಹದ ತಾಪಮಾನವನ್ನು ಕಾಯ್ದುಕೊಳುವಲ್ಲಿ ಅತಿ ಮುಖ್ಯ ಪಾತ್ರ ವಹಿಸುವುದು ದೇಹದಲ್ಲಿನ ಜಲಾಂಶ. ನಮ್ಮ ದೇಹದ ಅವಶ್ಯಕತೆಗೆ ತಕ್ಕಂತೆ ನೀರನ್ನು ಸೇವಿಸುವುದು ಅತ್ಯವಶ್ಯಕ, ಅದರೊಟ್ಟಿಗೆ ಹಲವು ಆರೋಗ್ಯಕರ ಆಹಾರಗಳ ಸೇವನೆ ಇಂದ ದೇಹದ ತಾಪಮಾನವನ್ನು ಹತೋಟಿಯಲ್ಲಿಡಬಹುದು.

 • ಆಪ್ರಿಕಾಟ್ (ಸಕ್ಕರೆ ಬಾದಾಮಿ) (Apricot): ಸಕ್ಕರೆ ಬಾದಾಮಿ ಅಥವಾ ಜಾರ್ದಾಳು ಎಂದು ಕರೆಯುವ ಆಪ್ರಿಕಾಟ್ ಹಣ್ಣಿನ ರಸಕ್ಕೆ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ದಾಹ ಹಾಗೂ ದೇಹದ ತಾಪಮಾನವನ್ನು ಹತೊಟಿಯಲ್ಲಿಡಬಹುದು. ಆಪ್ರಿಕಾಟ್ ಹಣ್ಣುಗಳು ಘನರೂಪದಲ್ಲಿ ದೊರೆಯುವುದರಿಂದ ಅವುಗಳನ್ನು ಹಿಂಡಿ, ರಸವನ್ನು ತೆಗೆದು ಸೇವಿಸಬೇಕಾಗುತ್ತದೆ.
 • ಪೀಚ್ ಹಣ್ಣು (Peaches): ದೇಹದ ಉಷ್ಣತೆ ಹೆಚ್ಚುವುದರಿಂದ ಚರ್ಮದ ಮೇಲೆ ದದ್ದು ಹಾಗೂ ಬೆವರುಸಾಲೆಯಂತಹ ಸಮಸ್ಯೆಗಳು ಉಂಟಾಗಬಹುದು. ಇದನ್ನು ತಡೆಗಟ್ಟಲು ಪೀಚ್ ಹಣ್ಣುಗಳು ಶಾಯ ಮಾಡುತ್ತವೆ. ಪೀಚ್ ಹಣ್ಣುಗಳಲ್ಲಿ ವಿಟಮಿನ್ ಎ ನ್ಯೂ, ಬಿ2 ಹಾಗೂ ಪೊಟ್ಯಾಷಿಯಂ ಹೇರಳವಾಗಿ ಇರುವುದರಿಂದ ಚರ್ಮದ ಆರೋಗ್ಯವನ್ನು ಕಾಪಾಡಲು ಬಹಳ ಪರಿಣಾಮಕಾರಿ.
 • ಏಲಕ್ಕಿ (Cardamom): ಆಯುರ್ವೇದದ ಪ್ರಕಾರ ಏಲಕ್ಕಿ ದೇಹದ ತಾಪಮಾನವನ್ನು ಕಾಯ್ದುಕೊಳ್ಳುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಏಲಕ್ಕಿಯನ್ನು ಚಹಾ ಅಥವಾ ಸಿಹಿತಿಂಡಿಗಳಲ್ಲಿ ಬಳಸಬಹುದು.
 • ಮಜ್ಜಿಗೆ (Buttermilk): ಬೇಸಿಗೆಯಲ್ಲಿ ಮಜ್ಜಿಗೆಯನ್ನು ಸೇವಿಸುವುದರಿಂದ ನಮ್ಮ ದೇಹವು ಬೆವರಿನ ಮೂಲಕ ಕಳೆದುಕೊಂಡ, ಹಾಗೂ ದೇಹಕ್ಕೆ ಅತ್ಯವಶ್ಯವಾದ ಪ್ರೊಬಯಾಟಿಕ್ಗಳು , ಖನಿಜ ಹಾಗೂ ಜೀವಸತ್ವಗಳು ಪುನಃಸರಬರಾಜಾಗುತ್ತವೆ ಮತ್ತು ಬೇಗೆಯನ್ನು ಸಹಿಸಲು ದೇಹಕ್ಕೆ ಸಹಾಯವಾಗುತ್ತದೆ.
 • ಕಲ್ಲಂಗಡಿ (Watermelon): ಕಲ್ಲಂಗಡಿ ಹಣ್ಣಿನಲ್ಲಿ ಪ್ರತಿಶತ 95 ರಷ್ಟು ನೀರು ಇರುವುದರಿಂದ, ದೇಹವನ್ನು ತಂಪಾಗಿಡಲು ಇದೊಂದು ಅಧ್ಬುತವಾದ ಹಣ್ಣು. ಕಲ್ಲಂಗಡಿಯನ್ನು ಹಾಗೆಯೇ ಹೋಳು ಮಾಡಿ ಸೇವಿಸಬಹುದು ಅಥವಾ ರಸವನ್ನು ತೆಗೆದು ಉಪ್ಪು, ಕರಿಮೆಣಸಿನ ಪುಡಿ ಹಾಗೂ ನಿಂಬೆ ಹಣ್ಣಿನ ರಸದೊಂದಿಗೆ ಬೆರೆಸಿ ರುಚಿಯಾದ ಪಾನೀಯವನ್ನು ಮಾಡಿ ಸೇವಿಸಬಹುದು.
 • ಎಳನೀರು (Coconut  water): ದೇಹದಲ್ಲಿನ ನೀಇರಿನ ಮತ್ಟವನ್ನು ಕಯ್ದುಕೊಳ್ಳಲು ಬಹಳ ಉಪಯುಕ್ತವಾದ ಪಾನೀಯ ಎಳನೀರು. . ಅಷ್ಟೇ ಅಲ್ಲದೆ ದೇಹಕ್ಕೆ ಅವಶ್ಯವಾದ ಎಲೆಕ್ಟ್ರೋಲೈಟ್ಗಳನ್ನು ಸಹ ಎಳನೀರು ಯಥ್ತೆಚವಾಗಿ ಒದಗಿಸುತ್ತದೆ ಹಾಗೂ ದೇಹದ ತಾಪಮಾನವನ್ನು ನಿಯಂತ್ರಣದಲ್ಲಿಡುತ್ತದೆ.

ಮೇಲಿನ ಆಹರಗಳಲ್ಲದೆ, ಸೌತೆಕಾಯಿ, ಬಾಳೆಹಣ್ಣು, ಕಬ್ಬಿನ ರಸ, ಬಾರ್ಲಿ, ನಿಂಬೆ ಹಾಗೂ ಇತರೆ ಹುಳಿ ಹಣ್ಣುಗಳು ಮತ್ತು ಪುದೀನಾ ಅಥವಾ ಸೊಂಪಿನಿಂದ ತಯಾರಿಸಲಾದ ನೈಸರ್ಗಿಕ ಚಹಾ. ಇವುಗಳಿಂದಲೂ ದೇಹದ ತಾಪಮಾನವನ್ನು ಸುಸ್ತಿತಿಯಲ್ಲಿಟ್ಟುಕೊಳ್ಳಬಹುದು.

ದೇಹಕ್ಕೆ ತಂಪು ತರುವ ಖರ್ಬೂಜ ಹಣ್ಣು (Honey dew melon to avoid excessive body heat)

ಉಷ್ಣ ಸಂಭಂದಿ ರೋಗಗಳಿಗೆ, ಖರ್ಬೂಜ ಹಣ್ಣು ಅತ್ಯಂತ ಪರಿಣಾಮಕಾರಿ ಔಷಧ. ಬೇಸಿಗೆಯಲ್ಲಿ ಯಥ್ತೆಚವಾಗಿ ದೊರೆಯುವ ಖರ್ಬೂಜ ಹಣ್ಣನು ಹೋಳುಮಾಡಿ ಅಥವಾ ರಸವನ್ನು ತೆಗೆದು ಸೇವಿಸಬಹುದು. ಬೇಸಿಗೆಯ ಬೇಗೆಯಲ್ಲಿ ತಂಪನು ನೀಡುವುದಲ್ಲದೆ ದೇಹಕ್ಕೆ ಅವಶ್ಯವಾದ ಪೋಷಕಾಂಶಗಳು , ವಿಟಮಿನ್ ಬಿ ಮತ್ತು ಕಬ್ಬಿಣಾಂಶಗಳನ್ನು ಒದಗಿಸುತ್ತದೆ. ಬೇಸಗೆಯಲ್ಲಿ ಈ ಹಣ್ಣು ಆರೋಗ್ಯಕ್ಕೆ ಬಹಳ ಉಪಯುಕ್ತ.

ಪುದೀನಾದೊಂದಿಗೆ ದೇಹದ ತಾಪಮಾನ ಹತೋಟಿ (Control body heat with mint)

ಅನೇಕ ಖ್ಯದ್ಯಗಳಲ್ಲಿ ಸುವಾಸನೆ ಹಾಗೂ ರುಚಿಗಾಗಿ ನಾವು ಯಥ್ತೆಚವಾಗಿ ಬಳಸುವ ಪುದೀನಾ ಬೇಸಗೆಯ ಬೇಗೆಯಲ್ಲಿಯೂ ಸಹ ನಮ್ಮ ಸಹಾಯಕ್ಕೆ ಬರುತ್ತದೆ. ಪುದೀನಾ ರಸ ಹಾಗೂ ಏಲೆಗಳನ್ನು ಬಳಸಿ ದೇಹದ ತಾಪಮಾನವನ್ನು ಹತೊಟಿಯಲ್ಲಿದುವುದು ಸಾಧ್ಯ ಹಾಗೂ ಅನೇಕ ವೈಧ್ಯರು ಶ ಪುದಿನವನ್ನು ಸಲಹೆ ಮಾಡುತ್ತಾರೆ. ಅಷ್ಟೆಅಲ್ಲದೆ, ಪುದೀನಾವನ್ನು ನಿರಂತರವಾದ ಸೇವನೆಯಿಂದ ಮೊಡವೆಗಳ್ಳನ್ನು ಕಡಿಮೆಮಾಡಿ ಹೊಳೆಯುವ, ಕಾಂತಿಯುತವಾದ ಚರ್ಮವನ್ನು ಪಡೆಯಬಹುದು.

ಸೌತೆಕಾಯಿ (Cucumber to control body heat)

ಬೇಸಿಗೆಯಲ್ಲಿ ಎಲ್ಲೆಡೆಯೂ ಕಣ್ಣಿಗೆ ಬೀಳುವ ತರ್ಕಾರಿ ಸೌತೆಕಾಯಿ. ಏಕೆಂದರೆ ದೇಹದೆ ಉಷ್ಣತೆಯನ್ನು ಕಡಿಮೆಮಾಡಿ ದೇಹವನ್ನು ತಂಪಾಗಿರಿಸುವಲ್ಲಿ ಸೌತೆಕಾಯಿ ಬಹಳ ಪರಿಣಾಮಕಾರಿ. ಮುಖ್ಯವಾಗಿ ಬೇಸಿಗೆಯಲ್ಲಿ ಪ್ರಯಾಣಿಸುವ ಜನರಿಗೆ ಸೌತೆಕಾಯಿ ವರಧಾನವೆ ಸರಿ. ಸೌತೆಕಾಯಿಯನ್ನು ದಿನನಿತ್ಯವೂ ಸೇವಿಸುವುದರಿಂದ ದೇಹವನ್ನು ತಂಪಾಗಿಡಬಹುದು ಹಾಗೂ ದೇಹದ ನೀರಿನ ಅಂಶವನ್ನು ಕಾಯ್ದುಕೊಳ್ಳಬಹುದು.

ಮೂಲಂಗಿ (Reduce body heat with radish)

ಬೇಸಿಗೆಯಲ್ಲಿ ಸಾಮಾನ್ಯವಾದ ಬಿಸಿಲಿನ ಹೊಡೆತದಿಂದ ಪಾರಾಗಲು ನಾವು ನಮ್ಮ ದೇಹದ ಆಂತರಿಕ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಬೇಕು. ಈ ಕಾರಣಕ್ಕಾಗಿ ನೀರಿನ ಅಂಶ ಹಾಗೂ ವಿಟಮಿನ್ಫ್ “ಸಿ” ಹೆಚ್ಚಾಗಿರುವ ಮೂಲಂಗಿ ಬಹಳ ಪರಿಣಾಮಕಾರಿ. ಅಷ್ಟೇ ಅಲ್ಲದೆ ದೇಹಕ್ಕೆ ತಂಪಾಗಿರಲು ಅತ್ಯಾವಶ್ಯವಾದ ಉತ್ಕರ್ಷಣಗಳ್ಳನ್ನು ಸಹ ಮೂಲಂಗಿ ಹೊಂದಿರುತ್ತದೆ. ಬಿಸಿಲಿನ ಬೇಗೆಯಿಂದ ಉಂಟಾಗುವ ಒತ್ತಡಗಳನ್ನು ಸಹ ಕಡಿಮೆ ಮಾಡಲು ಮೂಲಂಗಿ ಅತ್ಯಂತ ಪರಿಣಾಮಕಾರಿ.

ಸೊಂಪಿನೊಂದಿಗೆ ದೇಹಕ್ಕೆ ತಂಪು (How to reduce body heat with fennel seeds)

ಸೊಂಪು ಬಿಜಗಳನ್ನು ನೀರಿನಲ್ಲಿ ರಾತ್ರಿ ನೆನೆಹಾಕಿ, ಬೆಳಿಗ್ಗೆ ಆ ನೀರನ್ನು ಸೋಸಿ ಕುಡಿದರೆ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಅನೇಕ ಅಡುಗೆಗಳಲ್ಲಿ ಹೆಚ್ಚಾಗಿ ಬಳಸಲ್ಪಡುವ ಸೊಂಪು ಆರೋಗ್ಯದ ದೃಷ್ಟಿಯಿಂದಲೂ ಹಾಗೂ ದೇಹವನ್ನು ತಂಪಾಗಿಡಲು ಬಹಳ ಉಪಯುಕ್ತ.

ಮೆಂತ್ಯ (Fenugreek seed)

ನಮ್ಮ ಪೂರ್ವಜರು ಮೆಂತ್ಯೆಯನ್ನು ಬಳಸಿ ದೇಹಾದ್ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳುತಿದ್ದರು. ಬೇಸಗೆಯ ಸುಡುವ ಬಿಸಿಲಿನಲ್ಲಿ ಸಹ ದೇಹವನ್ನು ತಂಪಾಗಿಡಲು ಮೆಂತ್ಯ ಸಹಾಯ ಮಾಡುತ್ತದೆ. ಮೆಂತ್ಯೆಯನ್ನು ಪುಡಿಮಾಡಿ ಅನ್ನದೊಂದಿಗೇ ಸೇವಿಸ ಬಹುದು ಅಥವಾ ಮೆಂತ್ಯ ಬಿಜಗಳನ್ನು ನೀರಿನಲ್ಲಿ ನೆನೆಸಿ ಆ ನೀರನ್ನು ಪ್ರತಿದಿನ ಬೆಳಿಗ್ಗೆ ಸೇವಿಸಿ ಬೇಸಿಗೆಯಲ್ಲೂ ದೇಹವನ್ನು ತಂಪಾಗಿರಿಸಿಕೊಳ್ಳಬಹುದು.

ನೀರು (Splash of water)

ಮಾನವ ದೇಹದ ಪ್ರತಿಶತ 75 ಭಾಗ ನಿರಾಗೀರುವುದರಿಂದ ನೀರು ದೇಹದ ಆರೋಗ್ಯಕ್ಕೆ ಅತ್ಯಾವಶ್ಯಕವೆಂದೇ ಹೇಳಬೇಕು. ದೇಹಕ್ಕೆ ಅವಶ್ಯವಾದಷ್ಟು ನೀಇರನ್ನು ನಾವು ಪ್ರತಿದಿನ ಸೇವೀಸಿ ದೇಹದ ಉಷ್ಣತೆಯನ್ನು ಹತೋಟಿಯಲ್ಲಿಡಬಹುದು. ಅಷ್ಟೇ ಅಲ್ಲದೆ ದೆಹದೊಳಗಿರುವ ಉಷ್ನಾಕಾರಕ ಕಲ್ಮಶಗಳನ್ನು ಸಹ ನೀರು ಹೊರಹಾಕುತ್ತದೆ. ಸತತವಾಗಿ ನೀರು ಕುಡಿಯುವುದು ಮಾತ್ರವಲ್ಲದೆ ಆಗಾಗ ಕೈ ಹಾಗೂ ಮುಖದ ಮೇಲೆ ನೀರನ್ನು ಸಿಂಪಡಿಸಿಕೊಳ್ಳುವುದರ ಮೂಲಕ ಬೇಸಿಗೆಯ ಬೇಗೆಯಿಂದ ತಪ್ಪಿಸಿಕೊಳ್ಳಬಹುದು.

ತಂಪಾದ ಹಾಲು (Cold milk)

ಹಸಿ ಹಾಲನ್ನು ಫ್ರಿಡ್ಜ್ನಲ್ಲಿಟ್ಟು ಸತತವಾಗಿ ಸೇವಿಸುವುದರಿಂದ ದೇಹದ ತಾಪಮಾನವನ್ನು ಕಡಿಮೆ ಮಾಡಿ ಕೊಳ್ಳಬಹುದು ಆದರೆ ಹಾಲು ಅತಿಶೀತವಾಗಿರದಂತೆ ನೋಡಿಕೊಳ್ಳಿ. ಬರಿಹಾಳನ್ನು ಸೇವಿಸಲು ಇಶ್ಟಪಡದವರು ಅದರೊಂದಿಗೆ ಸ್ಟ್ರಾಬೆರ್ರಿ, ಚಾಕೋಲೇಟ್ ಬೆರೆಸಿ “ಮಿಲ್ಕ್ ಶೇಕ್” ಮಾಡಿ ಸೇವಿಸಬಹುದು ಅಥವಾ ಕಾಫಿ ಹಾಗೂ ಸಕ್ಕರೆ ಬೆರಸಿ ಕಫೇಚೀನೋ ಮಾಡಿಕೊಂಡು ಸವಿಯಬಹುದು ಅಷ್ಟೇ ಅಲ್ಲದೆ ತಂಪಾದ ನೀರಿಗೆ ಎರಡು ಚಮಚ ಜೇನುತುಪ್ಪ ಬೆರೆಸಿ ಸೇವಿಸಿದರೆ ಬೇಸಿಗೆಯ ಬೇಗೆಯಿಂದ ತಪ್ಪಿಸಿಕೊಳ್ಳಬಹುದು.

ನಿಂಬೆಹಣ್ಣು (Lemon as a remedy to reduce body heat)

ದೇಹದ ಉಷ್ಣತೆ ಅತಿಯಾದಾಗ ದ್ರವ ಪದಾರ್ಥಗಳ ಸೇವನೆಯಿಂದ ದೇಹದಲ್ಲಿನ ನೀರಿನ ಕೊರತೆಯನ್ನು ಇಂಗಿಸಬಹುದು. ನಿಂಬೆಹಣ್ಣು ರಸವನ್ನು ಮಾಡಲು ಪ್ರಶಸ್ತವಾದ ಹಣ್ಣು. ಅದರಲ್ಲಿರುವ “ಸಿ” ವಿಟಮಿನ್ ದೇಹವನ್ನು ತಂಪಾಗಿಸಲು ಬಹಳ ಸಹಾಯಕಾರಿ. ಅರ್ಧ ನಿಬೆಹಣ್ನನ್ನು ಒಂದು ಲೋಟ ನೀರಿಗೆ ಬೆರೆಸಿ, ಸಲ್ಪ ಉಪ್ಪನ್ನು ಬೆರೆಸಿ, ಒಂದು ಚಮಚ ಜೇನುತುಪ್ಪವನ್ನು ಕಲಸಿ(ಸಕ್ಕರೆ ಆರೋಗ್ಯಕರ ವಲ್ಲದಿರುವುದರಿಂದ ಬಳಸದಿರುವುದು ಒಳ್ಳೆಯದು) ಕುಡಿಯಬಹುದು.

ಪುದೀನಾ (Peppermint remedy to reduce body heat)

ದೇಹವನ್ನು ತಂಪಾಗಿ ಹಾಗೂ ಆಹ್ಲಾದಕರವಾಗಿ ಇರುಸುವುದರಲ್ಲಿ ಪುದೀನಾ ಬಲು ಉಪಯೋಗಿ. ಪುದಿನವನ್ನು ನೀರಿನಲ್ಲಿ ಹಾಕಿ ಕುದಿಸಿ ಆ ನೀರನ್ನು ಸೋಸಿ ಸ್ನಾನಕ್ಕೆ ಬಳಸಬಹುದು ಅಥವಾ ಪುದೀನಾ ಎಣ್ಣೆಯನ್ನು ಸ್ನಾನದ ನೀರಿಗೆ ಬೆರೆಸಿ ಮುದವಾದ ಸ್ನಾನವನ್ನು ಮಾಡಬಹುದು.
ಅಷ್ಟೇ ಅಲ್ಲದೆ ತಾಜಾ ಪುದೀನಾ ಎಲೆಗಳಿಂದ ಚಹಾ ತಯಾರಿಸಬಹುದು. ಕುದಿಯುತ್ತಿರುವ ನೀರಿಗೆ ಒಂದು ಚಮಚೆಯಷ್ಟು ತಾಜಾ ಅಥವಾ ಒಣಗಿದ ಔದಿನ ಎಲೆಗಳನ್ನು ಹಾಕಿ ಕುದಿದ ನಂತರ ನೀರನ್ನು ಸೋಸಿ ಅದಕ್ಕೆ ಜೇನುತುಪ್ಪವನ್ನು ಬೆರೆಸಿ ಸೇವಿಸಬಹುದು. ಇದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ.

ನೆಲ್ಲಿಕಾಯಿ (Indian gooseberry to control your body heat)

ಸುಡುವ ಬೇಸಿಗೆಯಿಂದ ನಮ್ಮನು ನಾವು ಕಾಪಡಿಕೊಳ್ಳುವುದು ಕಷ್ಟಸಾಧ್ಯವೇ ಸರಿ. ಈ ನಿಟ್ಟಿನಲ್ಲಿ ನಮಗೆ ನೆಲ್ಲಿಕಾಯಿ ಬಹಳ ಉಪಯುಕ್ತವಾದದ್ದು. ಅದರಲ್ಲಿ ಧಾರಾಳವಾಗಿರುವ ವಿಟಮಿನ್ “ಸಿ” ಬೇಸಿಗೆಯ ತಾಪ ದಿಂದ ನಮ್ಮನು ರಕ್ಷಿಸುತ್ತದೆ. ಎರಡು ಚಮಚ ನೆಲ್ಲಿಕಾಯಿಯ ರಸದೊಂದಿಗೆ ಒಂದು ಚಮಚ ಜೇನುತುಪ್ಪ ಹಾಗು ಅರ್ಧ ನಿಂಬೆ ಹಣ್ಣಿನ ರಸ ಹಾಗೂ ಚೂರು ಉಪ್ಪನ್ನು ಬೆರೆಸಿ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಬೇಗೆಯಿಂದ ಉಂಟಾಗುವ ಕಿರಿಕಿರಿ ಕಡಿಮೆಯಾಗಿ ಮಂನ್ಸು ಆಹ್ಲಾದಕಾರವಾಗಿರುತ್ತದೆ.

ಲೋಳೆಸರ(ಅಲೊವೆರ) (Aloe vera juice to control heat)

ನಮ್ಮ ಸುತ್ತಲೂ ಬೆಳೆಯುವ ಲೊಳೆಸರದ ಮಹತ್ವ ನಮ್ಮಗೆ ಬಹಳ ಇತ್ತೀಚಿನ ವರೆಗೂ ತಿಳಿದಿರಲಿಲ್ಲ. ಇತ್ತೀಚೆಗೆ ಪ್ರಸಾದನ ಸಾಮಗ್ರಿಗಳಲ್ಲಿ ಇದರ ಧಾರಾಳ ಬಳಕೆಯಿಂದ ಜನರಿಗೆ ಇದರ ಮಹತ್ವ ತಿಳಿದು ಬರುತ್ತಿದೆ. ಲೊಳೆಸರಯುಕ್ತ ಸಾಮಗ್ರಿಗಳ ಬಳಕೆಯಿಂದ ಜನರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಿದ್ದಾರೆ. ಆದ್ದರಿಂದ ಲೊಳೆಸರವನ್ನು ನೇರವಾಗಿ ಬಳಸಲು ಅಡ್ಡಿಯಿಲ್ಲ.
ಲೊಳೆಸರದ ಎಲೆಯ ಮೇಲ್ಭಾಗವನ್ನು ತೆಗೆದು ಅದರ ಆಂಟುದ್ರವವನ್ನು ನಮ್ಮ ಮುಖಕ್ಕೆ ಹಚ್ಚಿಕೊಂಡು 20 ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಬಹುದು. ಇದರಿಂದ ಮುಖವು ತಂಪಾಗುತ್ತದೆ.

ಅಷ್ಟೇ ಅಲ್ಲದೆ ಎರಡು ಚಮಚ ಲೊಳೆಸರದ ರಸಕ್ಕೆ ಉಪ್ಪು ಹಾಗೂ ನೀರನ್ನು ಬೆರೆಸಿ ಪಾನೀಯವನ್ನು ತಯಾರಿಸಿ ಕುಡಿಯುವುದರಿಂದ ದೇಹದ ಆಂತರಿಕ ಉಷ್ಣತೆ ಕಡಿಮೆಯಗುತ್ತದೆ.

ಖರಬೂಜ (Honey dew melon)

ಕಲ್ಲಂಗಡಿಯ ಲಾಭಗಳನ್ನು ನಾವು ಈಗಾಗಲೇ ತಿಳಿದಿದ್ದೇವೆ ಅದೇ ರೀತಿಯಾದ ತಂಪನ್ನೀಯುವ ಇನ್ನೊಂದು ಹಣ್ಣು ಖರ್ಬೂಜ. ಈ ಹಣ್ಣನು ಬೆಳಗಿನ ಉಪಹಾರಕ್ಕೆ ಅಥವಾ ಮಧ್ಯಾನ್ಹದ ಉಟವಾದ ನಂತರ ಸೇವಿಸುವುದರಿಂದ ದೇಹ ತಂಪಾಗುತ್ತದೆ. ಇಲ್ಲವೇ ಹಣ್ಣಿಗೆ ಜೇನುತುಪ್ಪ ಹಾಗೂ ಸ್ವಲ್ಪ ಉಪ್ಪು ಬೆರೆಸಿ ರುಚಿಯಾದ ಪೇಯವನ್ನು ತಯಾರಿಸಿ ಸೇವಿಸಬಹುದು. ಕುಡಿಯಲು ಬಹಳ ರುಚಿಯಾಗಿರುವುದರಿಂದ ಇದು ಮಕ್ಕಳಿಗೂ ಇಷ್ಟವಾಗುತ್ತದೆ.

ಬೇಸಿಗೆಯಲ್ಲಿ ಏರುವ ತಾಪಮಾನದಿಂದ ದೇಹದೊಳಗೆ ಅನೇಕ ತೊಂದರೆಗಳು ಬರಬಹುದು. ಸಾಮಾನ್ಯವಾಗಿ 98.6 ಫ್ಯಾರೆನ್ಹೈಟ್ನಷ್ಟು ಇರುವ ನಮ್ಮ ದೇಹದ ಉಷ್ಣಾಗ್ರತೆ ಒಂದೆರಡು ಡಿಗ್ರಿ ಏರುಪೇರಾದರೆ ಅನಾರೋಗ್ಯಕ್ಕೆ ಈಡುಮಾಡಬಹುದು. ದೇಹದ ತಾಪಮಾನವ ಏರುವುದನ್ನು ಸಾಮಾನ್ಯವಾಗಿ ನಾವು ಬೇಸಿಗೆಯಲ್ಲಿ ಗಮನಿಸಬಹುದು. ಪರಿಸರದಲ್ಲಿ ಏರುತ್ತಿರುವ ಬಿಸಿಗೆ ತದ್ವಿರುದ್ದವಾಗಿ ನಮ್ಮ ದೇಹದ ತಂಪನ್ನು ನಾವು ಕಪಾಡಿಕೊಳ್ಳಬೇಕಾಗಿರುವುದರಿಂದ ನಾವು ಸೇವಿಸುವ ಆಹಾರ ಹಾಗೂ ಪಾನೀಯಗಳ ಮೇಲೆ ನಿಗಾ ಇಡುವುದು ಓಳ್ಳೆಯದು. ಮುಖ್ಯವಾಗಿ ದೇಹವನ್ನು ಟಂಪಾಗಿಡಲು ಸಹಾಯಾಕವಾಗುವಂತಹ ಆಹಾರಗಳನ್ನು ಸೇವಿಸುವುದು ಒಳ್ಳೆಯದು.

ದೇಹವನ್ನು ತಂಪಾಗಿರಿಸುವ ಆಹಾರ ಹಾಗೂ ಪಾನೀಯಗಳು (Body heat reduction food and drinks)

ಪುದೀನಾ ರಸ (Mint leaves juice)

ಪುದೀನಾ ಎಲೆಗಳ್ಳನ್ನು ಜಜ್ಜಿ, ಸ್ವಲ್ಪ ಉಪ್ಪು ಬೆರೆಸಿ ಪಾನೀಯವನ್ನು ಮಾಡಿ ಕುಡಿಯುವುದರಿಂದ ದೇಹವು ತಂಪಾಗಿರುತ್ತದೆ. ಪಾನೀಯದ ರುಚಿ ಹೆಚ್ಚಿಸಲು ಸಲ್ಪ ಸಕ್ಕರೆಯನ್ನು ಹಾಕಿಕೊಳ್ಳಬಹುದು.

ಮೂಲಂಗಿ (Radish in vegetable)

ಬೇಸಿಗೆಯ ಉಟಕ್ಕೆ ದೇಹವನ್ನು ತಂಪಾಗಿರುಸುವಂತಹ ಸಾರು ಅಥವಾ ಪಲ್ಯಗಳ ಅವಶ್ಯಕತೆ ಬಹಳ ಇದೆ. ಈರೀತಿಯಾದ ಒಂದು ತರಕಾರಿ ಎಂದರೆ ಮೂಲಂಗಿ. ಮೂಲಂಗಿ ಬಳಸಿ ಮಾಡಿದ ಹುಳಿ, ಸಾರು ಅಥವಾ ಪಲ್ಯಗಳಲ್ಲಿ ವಿಟಮಿನ್ “ಸಿ” ಸಹ ಹೇರಳವಾಗಿರುತ್ತದೆ.

ಕಬ್ಬಿನ ರಸ (Sugarcane juice)

ಬೇಸಿಗೆಯಲ್ಲಿ ಏಲ್ಲೆಡೆಯು ಕಾಣಸಿಗುವ ದೃಶ್ಯವೆಂದರೆ ಕಬ್ಬಿಣ ರಸ ಮಾರುವವರದು. ಹೌದು. ಬೇಸಗೆಯ ಬೇಗೆಯಿಂದ ನಮ್ಮನು ನಾವು ರಕ್ಶಿಸಿಕೊಳ್ಳುವುದರಲ್ಲಿ ಕಬ್ಬಿನ ರಸ ಬಹಳ ಸಹಾಯಕಾರಿ. ಬೇಸಗೆಯಲ್ಲಿ ಆಚೆ ತಿರುಗಲು ಹೊರಟಾಗ ಕಬ್ಬಿನ ರಸವನ್ನು ಸೇವಿಸುವುದರಿಂದ ದೇಹವನ್ನು ತಂಪಾಗಿರಿಸಿಕೊಳ್ಳಬಹುದು.

ತಂಪು ಕಾಫಿ (Cold coffee)

ದೇಹವನ್ನು ತಂಪಾಗಿರಿಸಿಕೊಳ್ಳಲು ಅನೇಕ ರೀತಿಯ ಪಾನಿಯಗಳಿವೆ.ಇವುಗಳ್ಳಲ್ಲಿ ಕಾಫಿ ಕೂಡ ಒಂದು. ಐಸ್ ಬೆರೆಸಿದ ಹಾಲಿನೊಂದಿಗೆ ಕದಡಿ ಮಾಡಿದ ತಂಪು ಕಾಫಿಯ ಸಹಾಯದಿಂದ ನಾವು ನಮ್ಮ ದೇಹದ ತಾಪಮಾನವನ್ನು ತಂಪಾಗಿರಿಸಿಕೊಳ್ಳಬಹುದು.