Simple kannada tips to increase hair volume naturally – ಕೂದಲ ಪರಿಮಾಣ ಹೆಚ್ಚಿಸಲು ಸರಳ ನೈಸರ್ಗಿಕ ವಿಧಾನಗಳು

ಕೆಲವು ವರ್ಷಗಳ ಮುನ್ನ ಜನರಲ್ಲಿ ದಟ್ಟವಾದ ಕೂದಲು ತಲೆಯ ತುಂಬಾ ಇರುತ್ತಿತ್ತು. ಆ ಸಮಯದಲ್ಲಿ ಕೂದಲ ಆರೈಕೆಗೆ ಹೆಕ್ಕ್ಚ್ಚು ರಾಸಾಯನಿಕಗಳು ಬಳಕೆಯಾಗುತ್ತಿರಲಿಲ್ಲ ಹಾಗೂ ರಸ್ತೆಗಳಲ್ಲಿ ಇವಾಗ ಇರುವಷ್ಟು ಮಾಲಿನ್ಯವು ಇರುತ್ತಿರಲಿಲ್ಲ. ಆದರೆ ಇಂದು ಕಾಲ ಬದಲಾಗಿದೆ. ಹೆಚ್ಚು ಹೆಚ್ಚು ಜನರು ಕೂದಲ ಉದುರುವಿಕೆಯ ಹಾಗೂ ತೆಳುವಾಗುವಿಕೆಯ ಬಗ್ಗೆ ದೂರುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ರಾಸಾಯನಿಕಯುಕ್ತ ಉತ್ಪನ್ನಗಳ ಬಳಕೆ. ಇದರಿಂದ ಕೂದಲಿಗೆ ಹಾನಿಯಾಗಿ ಅದರ ದಟ್ಟಣೆ ಹಾಗೂ ಪರಿಮಾಣದಲ್ಲಿ ಏರುಪೇರಾಗುತ್ತದೆ. ಅತಿಯಾಗುತಿರುವ ಬಿಸಿಗಾಳಿ ಯಂತ್ರ ಹಾಗೂ ಕೂದಲು ಇಸ್ತ್ರಿ ಮಾಡುವ ಯಂತ್ರದ ಬಳಕೆಯು ಕೂದಲು ಹಾನಿಗೆ ಒಳಗಾಗಿ ಕಿತ್ತು ಬರುವುದನ್ನು ಹೆಚ್ಚಿಸುತ್ತಿದೆ. ವಿಷಾದಕರ ವಿಷಯವೇನೆಂದರೆ ನಮ್ಮ ಕೂದಲ ದಟ್ಟಣೆ ಕಡಿಮೆಯಾಗುವುದು ನಮ್ಮ ಬಾಚಣಿಕೆಯ ಮೇಲೆ ಗೊತ್ತಾಗುತ್ತದೆ. ಆದರೆ ಇಂದಿಗೂ ಕೆಲವು ನೈಸರ್ಗಿಕ ವಿಧಾನಗಳನ್ನು ಬಳಸಿ ನಿಮ್ಮ ಕೂದಲು ಪರಿಮಾಣವನ್ನು ಹೆಚ್ಚಿಸಿಕೊಳ್ಳಬಹುದು.

ಅಂದವಾದ ಕೂದಲು ಸೌಂದರ್ಯದ ಪ್ರಥಮ ರಾಯಭಾರಿ. ಅಂದವಾದ ಹಾಗೂ ದಟ್ಟವಾದ ಕೂದಲು ಆತ್ಮವಿಶ್ವಾಸವನ್ನು ಹೆಚ್ಚಿಸಿ ನಮ್ಮನ್ನು ವಿಶೇಷವಾಗಿಸುತ್ತದೆ. ಆದರೆ ವಿರಳಾವಾಗಿರುವ ಕೂದಲು ನಿಮ್ಮನ್ನು ದುಖಃ ಹಾಗೂ ಖಿನ್ನರನ್ನಾಗಿ ಮಾಡುತ್ತದೆ. ಆದರೆ ಅದರ ಕುರಿತು ಆಲೋಚಿಸುವ ಅವಸರವಿಲ್ಲ. ಮಾರುಕಟ್ಟೆಯಲ್ಲಿ ಅನೇಕ ಉತ್ಪನ್ನಗಳು ಕೂದಲು ಉದುರುವುದನ್ನು ತಡೆಯಲು ಬಂದಿವೆ ಹಾಗೂ ಬಹಳಷ್ಟು ಉತ್ಪನ್ನಗಳನ್ನು ಸರಿಯಾಗಿ ನಿಯಮಗಳಿಗೆ ಅನುಸಾರವಾಗಿ ಬಳಸಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು. ನಿಮ್ಮ ಕೂದಲನ್ನು ಸುಂದರವಾಗಿಸಲು ಕೆಲವು ಸಲಹೆಗಳು ಬೇಕೇ? ಈ ಕೆಳಗಿನ ಸಲಹೆಗಳನ್ನು ಪಾಲಿಸಿ ಹಾಗೂ ಸುಂದರವಾದ, ದಟ್ಟವಾದ ಕೂದಲನ್ನು ನೈಸರ್ಗಿಕವಾಗಿ ಪಡೆಯಬಹುದು.

ದಟ್ಟವಾದ ಕೂದಲು, ಮುಖ್ಯವಾಗಿ ಹೆಂಗಸರಲ್ಲಿ ಸದಾ ಸೌಂದರ್ಯದ ಚಿನ್ಹೆಯಾಗಿರುತ್ತದೆ. ಪ್ರಾಚೀನ ಕಾಲದಲ್ಲಿ ವಧುವನ್ನು ಆಯ್ಕೆ ಮಾಡಿಕೊಳ್ಳುವಾಗ ವರನ ಮನೆಯವರು ಅವಳ ಕೂದಲನ್ನು ದಪ್ಪವಾಗಿದೆಯಾ, ಸಣ್ಣದಾಗಿದೆಯೇ ಹಾಗೂ ಉದ್ದವಾಗಿದೆಯೇ ಎಂದು ನೋಡಿ ಆಯ್ದುಕೊಳ್ಳುತ್ತಿದ್ದರು. ಆದರೆ ಕೆಲವು ವರ್ಷಗಳ ನಂತರ ಉದ್ದ ಕೂದಲಿನ ಕಡೆಗಿನ ಒಲವು ಕಡಿಮೆಯಾಯಿತು. ಹಾಗೂ ಈಗ ಮಾದ್ಯಮ ಉದ್ದದ ಕೂದಲನ್ನು ಜನ ಇಷ್ಟ ಪಡುತ್ತಾರೆ. ಆದರೆ ಕೂದಲನ್ನು ದಟ್ಟವಾಗಿ ಹಾಗೂ ಹೇರಳವಾಗಿ ಇರಿಸಿಕೊಳ್ಳುವುದೇ ಒಂದು ಸಮಸ್ಯೆಯಾಗಿದೆ. ಈ ಕೆಳಗಿನ ವಿಧಾನಗಳನ್ನು ಬಳಸಿ ನಿಮ್ಮ ಕೂದಲ ಗಾತ್ರವನ್ನು ನೀವು ಕಾಪಾಡಿಕೊಳ್ಳಬಹುದು.

ಕೂದಲ ದಟ್ಟಣೆಯನ್ನು ನೈಸರ್ಗಿಕವಾಗಿ ಹೆಚ್ಚಿಸುವುದು ಹೇಗೆ? (How to increase hair volume naturally)

ದಟ್ಟ ಕೂದಲಿಗಾಗಿ ತೈಲ ಮರ್ದನ (Oil massage for thicker hair)

ನಿಮ್ಮ ನೆತ್ತಿಯನ್ನು ನಿಯಮಿತವಾಗಿ ಮಾಲಿಶು ಮಾಡಿಕೊಳ್ಳಿ. ತಲೆಯ ಮಾಲಿಶು ಮಾಡುವುದರಿಂದ ರಕ್ತ ಪರಿಚಲನೆ ಹೆಚ್ಚಿ ನಿಮ್ಮ ಕೂದಲ ಬೇರುಗಳು ದೃಢವಾಗುತ್ತವೆ. ಕೂದಲು ಹಾಗೂ ನೆತ್ತಿಯನ್ನು ಬೆಚ್ಚಗಿನ ಎಣ್ಣೆಯಿಂದ ಮಾಲಿಶು ಮಾಡಿರಿ. ಹಾಗೂ ನೆತ್ತಿಯನ್ನು ವೃತ್ತಾಕಾರವಾದ ಚಲನೆಯಿಂದ ಮಾಲಿಶು ಮಾಡಿ. ಮಾಲಿಶಿಗೆ ಕಡಲೆ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಅತ್ಯುತ್ತಮವಾದುದು. ತಲೆ ಹೊಟ್ಟಿನ ಸಮಸ್ಯೆ ಇದ್ದರೆ ರೋಸ್ಮೇರಿಯ ಎಣ್ಣೆಯನ್ನು ಬಳಸಬಹುದು. ಮಾಲಿಶು ಮಾಡಿಕೊಂಡ ನಂತರ ನಿಮ್ಮ ಕೂದಲನ್ನು ಬೆಚ್ಚಗಿನ ಚೌಕದಲ್ಲಿ ಸುತ್ತಿರಿ. ಇದರಿಂದ ಕೂದಲಿಗೆ ಮತ್ತಷ್ಟು ಆರೈಕೆ ದೊರೆಯುತ್ತದೆ. ಇದು ನಿಮ್ಮ ಕೂದಲನ್ನು ಕಾಪಾಡಿಕೊಳ್ಳಲು ಅತಿಮುಖ್ಯವಾದ ಸಲಹೆ. ಹಾಗೆಯೇ ನಿಮ್ಮ ಕೂದಲನ್ನು ವಾರಕ್ಕೆ ನಾಲ್ಕು ಬಾರಿ ತೊಳೆಯಿರಿ ಹಾಗೂ ನೆತ್ತಿಯನ್ನು ಶುಭ್ರವಾಗಿ ಇರಿಸಿಕೊಳ್ಳಿ.

ಕೂದಲ ದಟ್ಟಣೆಯನ್ನು ಹೆಚ್ಚಿಸಲು ಆಹಾರ ಹಾಗೂ ಸಮತೋಲಿತ ಆಹಾರ ಕ್ರಮ (Food to increase hair volume with a balanced diet)

ಕೂದಲು ಉದುರುವುದನ್ನು ತಡೆಗಟ್ಟುವುದಕ್ಕೆ ಮುಖ್ಯವಾದ ವಿಧಾನವೆಂದರೆ ಸಮತೋಲಿತ ಆಹಾರ ಕ್ರಮವನ್ನು ಪಾಟಿಸುವುದು. ಸಮತೋಲಿತ ಆಹಾರ ಸೇವಿಸುವುದರಿಂದ ನಿಮ್ಮ ಕೂದಲ ದಟ್ಟಣೆ ಹೆಚ್ಚುತ್ತದೆ. ನಿಮ್ಮ ಆಹಾರ ಪದ್ದತಿಯಲ್ಲಿ ಖನಿಜ, ಕಬ್ಬಿಣಾಂಶ, “ಸೀ” ಹಾಗೂ “ಬಿ” ಜೀವಸತ್ವ, ತಾಮ್ರಾಂಶ ಹಾಗೂ ತವರಗಳನ್ನು ಸರಿ ಪ್ರಮಾಣಗಳಲ್ಲಿ ಸೇವಿಸಿದಾಗಾ ನಿಮ್ಮ ಕೂದಲ ಆರೈಕೆಗೆ ಸಹಾಯ ವಾಗುತ್ತದೆ. ಮುಖ್ಯವಾದ ಅಂಶವೆಂದರೆ ಸಾಕಷ್ಟು ನೀರನ್ನು ಕುಡಿಯುವುದು. ಇದರಿಂದ ನಿಮ್ಮ ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡಬಹುದು.

ಕೋಮಲ ಕೇಶಕ್ಕಾಗಿ ಕಂಡೀಶ್ಣರ್(Conditioner) (Conditioning for smooth hair)

ಉತ್ತಮ ಗುಣಮಟ್ಟದ ಕಂಡೀಶ್ಣರ್ ನಿಮ್ಮ ಕೂದಲನ್ನು ಮೃದುವಾಗಿಸಿ ಹೊಳಪನ್ನು ನೀಡುತ್ತದೆ. ಕಂಡೀಶ್ಣರನ್ನು ಕೂದಲಿಗೆ ಶ್ಯಾಂಪುವಿನ ನಂತರ ಹಾಕಬೇಕು. ಕಂಡೀಶ್ಣರ್ ಹಾಕುವುದರಿಂದ ಕೂದಲನ್ನು ಸಂಭಾಳಿಸುವುದು ಬಹಳ ಸುಲಭವಾಗಿ ಸಿಕ್ಕು ತೆಗೆಯುವುದು ಸಹ ಸುಲಭವಾಗುತ್ತದೆ. ಕಂಡೀಶ್ಣರ್ ಅನ್ನು ನಿಮ್ಮ ನೆತ್ತಿಗೆ ಹಚ್ಚದೆ ನೆತ್ತಿಗೆ ಎರಡು ಮೂರು ಅಂಗುಲ ದೂರದಿಂದ ಕೂದಲ ಬುಡದವರೆಗೂ ಹಚ್ಚುವುದು ಉತ್ತಮ.

ಲೋಳೆಸರದಿಂದ ಕೂದಲು ದಟ್ಟಣೆ ಹೆಚ್ಚಿಸುವ ನೈಸರ್ಗಿಕ ಮದ್ದು (Natural home tips to increase hair volume with aloe vera)

ಲೋಳೆಸರವನ್ನು ಸರಿಯಾಗಿ ಬಳಸಿದರೆ ದಟ್ಟವಾದ ಹಾಗೂ ಹೊಳೆಯುವ ಕೂದಲು ನಿಮ್ಮದಾಗುತ್ತದೆ. ಲೊಳೆಸರ ನಿಮ್ಮ ಕೂದಲಿಗೆ ಅವಸರವಾಗಿರುವಂತಹ ಪೋಷಕಾಂಶ ಹಾಗೂ ತೇವಾಂಶವನ್ನು ಒದಗಿಸುತ್ತದೆ. ಲೊಳೇಸರವನ್ನು ನಿಮ್ಮ ನೆತ್ತಿಗೆ ಹಚ್ಚಿ ಒಂದು ಗಂಟೆಯ ವರೆಗೂ ಒಣಗಲು ಬಿಡಿ. ನಂತರ ಶಾಂಪೂ ಬಳಸಿ ತೊಳೆಯಿರಿ. ಇದರಿಂದ ನಿಮ್ಮ ಕೂದಲು ಹೊಳಪು ಬಂದು ಮೃದುವಾಗುತ್ತದೆ. ಲೋಳೆಸರವನ್ನು ನಿಯಮಿತವಾಗಿ ಬಳಸುವುದರಿಂದ ಕೂದಲು ಉದುರುವುದು ಸಹ ತಪ್ಪಿ ಕೂದಲು ನೈಸರ್ಗಿಕವಾಗೆ ಹೆಚ್ಚುತ್ತದೆ.

ರಾಸಾಯನಿಕಗಳ ಬಳಕೆ ಬಿಡುವುದರಿಂದ ಕೂದಲು ದಟ್ಟವಾಗುವುದು (No chemicals is an easy way to get thick hair)

ಹಾನಿಕಾರಕ ರಾಸಾಯನಿಕಗಳನ್ನು ಬಳಸುವುದನ್ನು ಬಿಟ್ಟರೆ ನಿಮ್ಮ .ಬಾಚಣಿಕೆಯ ಮೇಲೆ ಕಾಣುವ ಕೂದಲು ಕಡಿಮೆಯಾಗುವುದನ್ನು ನೋಡಬಹುದು. ಕೂದಲಿಗೆ ಬಣ್ಣ ಹಾಕುವುದು ಹಾಗೂ ಸುರುಳಿ ಸುತ್ತುವುದನ್ನು ಮಾಡುವುದರಿಂದ ನಿಮ್ಮ ಕೂದಲು ಉದುರುತ್ತದೆ. ಹೀಗಾಗಿ ಅಂತಹ ವಿಧಾನಗಳ ಕೈಬಿಡಿ. ಅಂತಹ ವಿಧಾನಗಳಿಂದ ನಿಮ್ಮ ಕೂದಲು ಒಣಗಿ ಬಾಡಿದಂತಾಗುತ್ತದೆ. ರಸಯನಿಕಗಳನ್ನು ಬಳಸುವುದರಿಂದ ನಿಮ್ಮ ಕೂದಲ ಬುಡವು ಸಡಿಲವಾಗಿ ಮುರಿಯಲು ಶುರುವಾಗುತ್ತದೆ. ಹಾಗಾಗಿ ರಸಯಾನಿಕಗಳ ಬಳಕೆ ಸಂಪೂರ್ಣವಾಗಿ ತೊರೆದು ಕೂದಲು ಹಾಳಾಗುವುದನ್ನು ತಪ್ಪಿಸಿ.

ಕೂದಲ ಮರುಬೆಳವಣಿಗೆಗೆ ಮೊಟ್ಟೆಯ ಮದ್ದು (Egg treatment for hair regrowth treatment)

ಕೂದಲು ಮರುಬೆಳವಣಿಗೆ ಹಾಗೂ ಕೂದಲು ಉದ್ದವಾಗಿ ಬೆಳೆಯುವುದಕ್ಕೆ ನೀವು ಈ ಸಲಹೆಯನ್ನು ಪಾಲಿಸಿರಿ. ಮೊಟ್ಟೆಯನ್ನು ನಿಮ್ಮ ಕೂದಲಿಗೆ ಹರಡುವಂತೆ ಹಚ್ಚಿಕೊಳ್ಳಿ. ಮೊಟ್ಟೆಯ ವಾಸನೆ ಸ್ವಲ್ಪ ಸಹಿಸಲಾಗದಂತೆ ಇದ್ದರೂ ಅದರಲ್ಲಿರುವ ಸಸಾರಜನಕ ನಿಮ್ಮ ಕೂದಲನ್ನು ಗಟ್ಟಿಗೊಳಿಸುತ್ತದೆ. ಮೊಟ್ಟೆಯನ್ನು ಹೊಡೆದು ಹಳದಿ ಹಾಗೂ ಬಿಳಿಯ ಭಾಗವನ್ನು ಕಲೆಸಿ ಅದನ್ನು ಒದ್ದೆಯಾದ ಕೂದಲಿಗೆ ಹಚ್ಚಿಕೊಳ್ಳಿ. ಹತ್ತು ನಿಮಿಷಗಳ ನಂತರ ಬೆಚ್ಚಗಿನ ನೀರೂ ಹಾಗೂ ಮಂದವಾದ ಶ್ಯಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿರಿ. ಈ ರೀತಿಯಾಗಿ ವಾರಕ್ಕೆ ಎರಡು ಬಾರಿ ಮಾಡಿಕೊಳ್ಳುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಮೆಂತ್ಯೆಯಿಂದ ಕೂದಲು ಉದುರುವುದನ್ನು ತಡೆಯಲು ಶಕ್ತಿವಂತ ಔಷಧಿ (Fenugreek seeds or methi powerful home remedy for hair growth)

ಮೆಂತ್ಯೆ ನಮ್ಮ ಅಡುಗೆ ಮನೆಯಲ್ಲಿ ಸದಾ ದೊರೆಯುವ ಒಂದು ಅಧ್ಬುತ ಪದಾರ್ಥ. ನೀವು ಇದನ್ನು ಬಳಸಿಕೊಳ್ಳಬಹುದು. ಮೆಂತ್ಯೆ ಬೀಜ ನಿಮ್ಮ ಕೂದಲ ದಟ್ಟಣೆ ಹೆಚ್ಚಲು ಸಹಾಯಮಾಡುತ್ತದೆ. ಮೆಂತ್ಯೆಯನ್ನು ಬಳಸಬೇಕಾದರೆ ನೀವು ಅದನ್ನು ಒಂದು ರಾತ್ರಿ ನೀರಿನಲ್ಲಿ ನೆನೆಸಿಡಬೇಕು. ನಂತರ ಅದನ್ನು ರುಬ್ಬಿಕೊಂಡು ಆ ಹಿಟ್ಟನ್ನು ಕೂದಲಿಗೆ ಹಚ್ಚಿಕೊಳ್ಳಬೇಕು. ಇದನ್ನು ಒಂದು ಗಂಟೆಯ ನಂತರ ನೀರಿನಿಂದ ತೊಳೆಯಬೇಕು. ಇದನ್ನು ಹಚ್ಚುವ ಮುನ್ನ ಹಾಗೂ ನಂತರದ ವ್ಯತ್ಯಾಸವನ್ನು ನೀವೇ ನೋಡುತ್ತೀರಿ. ಕೂದಲು ನುಣುಪಾಗಿ ಹಾಗೂ ಹೊಳಪಾಗಿ ಕಾಣುತ್ತದೆ. ಇದನ್ನು ವಾರಕ್ಕೆ ಒಮ್ಮೆ ಮಾಡಿಕೊಳುವುದರಿಂದ ಕೂದಲ ಬೆಳವಣಿಗೆ ಹೆಚ್ಚುತ್ತದೆ.

ಆಲೂಗಡ್ಡೆಯ ರಸದಿಂದ ಕೂದಲ ದಟ್ಟಣೆ ಹೆಚ್ಚಿಸುವುದು (Potato juice to increase hair thickness)

ಆಲೂಗಡ್ಡೆಯ ರಸದಲ್ಲಿ “ಏ”, “ಬಿ” ಹಾಗೂ “ಸೀ” ಜೀವಸತ್ವಗಳು ಇರುತ್ತವೆ. ಇವು ಕೂದಲ ಬೆಳವಣಿಗೆಗೆ ಅವಶ್ಯವಾದ ಪೋಷಕಾಂಶಗಳಾಗಿವೆ. ಆಲೂಗಡ್ಡೆಯ ರಸವನ್ನು ತೆಗೆದು ನೆತ್ತಿಗೆ ಹಚ್ಚಿಕೊಳ್ಳಿ. ಹದಿನ್Yದು ನಿಮಿಷಗಳ ನಂತರ ಮಂದವಾದ ಶ್ಯಾಂಪೂವಿನಿಂದ ತೊಳೆಯಿರಿ. ಇದನ್ನು ವಾರಕ್ಕೆ ಎರಡು ಸಾರಿ ಮಾಡುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.

ದಪ್ಪ ಕೂದಲಿಗಾಗಿ ನೆಲ್ಲಿಕಾಯಿಯ ಮಿಶ್ರಣ (Try amla hair pack for thick hair)

ಕೂದಲು ಉದುರುವುದನ್ನು ತಡೆಯಲು ಹಾಗೂ ಕೂದಲ ಬೆಳವಣಿಗೆ ಹೆಚ್ಚಲು ನೆಲ್ಲಿ ಕಾಯಿ ಬಹಳ ಸಹಾಯಕಾರಿ. ಬಹಳಷ್ಟು ಕೂದಲ ಸಂಬಂಧಿ ಉತ್ಪನ್ನಗಳಲ್ಲಿ ನೆಲ್ಲಿ ಕಾಯಿಯ ಉಪಯೋಗವಾಗುತ್ತದೆ. ಈ ನೈಸರ್ಗಿಕ ಪದಾರ್ಥ ನಿಮ್ಮ ಕೂದಲು ಉದುರುವುದನ್ನು ತಡೆದು ನಿಮ್ಮಗೆ ಹೊಳೆಯುವ ಕೂದಲನ್ನು ತ್ವರಿತವಾಗಿ ನೀಡುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಕೂದಲು ಕಾಳೆರಹಿತವಾಗದಂತೆ ಕಾಪಾಡಿ ಕೂದಲ ವರ್ಣವನ್ನು ಕಾಪಾಡುತ್ತದೆ. ನೆಲ್ಲಿಕಾಯಿ ಇರುವ ಪದಾರ್ಥಗಳ್ನ್ನು ಬಳಸುವುದರಿಂದ ನಿಮ್ಮ ಕೂದಲಿಗೆ ಒಳ್ಳೆಯದು ಆದರೆ ನೆಲ್ಲಿಕಾಯಿಯೊಂದಿಗೆ ರಸಯಾನಿಕಗಳು ಇರುವ ಉತ್ಪನ್ನಗಳನ್ನು ಬಳಸಬೇಡಿ. ಕೊಳ್ಳುವ ಮುನ್ನ ಅದನ್ನು ಪರೀಕ್ಷಿಸಿ.

ದಾಸವಾಳಾದ ಹೂವಿನಿಂದ ಕೂದಲು ಬೆಳೆಯುವುದಕ್ಕೆ ಮದ್ದು (Natural home remedy for hair growth with hibiscus flower)

ಕೂದಲು ಬೆಳೆಯುವುದಕ್ಕೆ ಸಹಾಯವಾಗಲು ಇದೊಂದು ಅತ್ಯುತ್ತಮ ಮನೆ ಮದ್ದು. ದಾಸವಾಳದ ಹೂವನ್ನು ಮಾತ್ರ ಕೂದಲ ಆರೈಕೆಗೆ ಬಳಸಲಾಗುತ್ತದೆ. ದಾಸವಾಳದ ಹೂವನ್ನು ಬಳಸಿ ಬಾಲನೆರೆ ಹಾಗೂ ಕೂದಲು ವಿರಳವಾಗುವ ಸಮಸ್ಯೆಯಿಂದ ಮುಕ್ತಿ ಹೊಂದಬಹುದು. ಹೂವಿನ ಪಕಳೆಗಳನ್ನು ಕೊಬ್ಬರಿ ಅಥವಾ ಎಳ್ಳಿನ ಎಣ್ಣೆಯಲ್ಲಿ ಅರೆದು ಆ ಮಿಶ್ರಣವನ್ನು ಕೂದಲಿಗೆ ಹಚ್ಚಿಕೊಳ್ಳಿ. ಹದಿನೈದು ನಿಮಿಷಗಳ ನಂತರ ಮಂದವಾದ ಶ್ಯಾಂಪೂ ಬಳಸಿ ತೊಳೆಯಿರಿ.

ಗೋರಂಟಿ ಬಳಸಿ ಕೂದಲು ದಟ್ಟಣೆ ಹೆಚ್ಚಿಸುವುದು (How to thicken hair naturally with henna)

ಈ ಮಿಶ್ರಣಕ್ಕಗಿ ಮನೆಯಲ್ಲೇ ಗೋರಂಟಿಯನ್ನು ಬಳಸುವುದು ಉತ್ತಮ. ಏಕೆಂದರೆ ಮಾರುಕಟ್ಟೆಯಲ್ಲಿ ದೊರೆಯುವ ಗೋರಂಟಿಯಲ್ಲಿ ರಾಸಾಯನಿಕಗಳನ್ನು ಬಳಸಿರುತ್ತಾರೆ. ಕೂದಲ ದಟ್ಟಣೆ ಹೆಚ್ಚಲು ಗೋರಂಟಿ ನೈಸರ್ಗಿಕವಾಗಿ ಸಹಾಯಮಾಡುತ್ತದೆ. ಚಹಾ ಕಷಾಯ, ಮೊಟ್ಟೆಯ ಬಿಳಿ, ನಿಂಬೆ ಹಾಗೂ ಮೊಸರನ್ನು ಗೋರಂಟಿ ಪುಡಿಗೆ ಬೆರೆಸಿ ರಾತ್ರಿ ಇಡೀ ಲೋಹದ ಪಾತ್ರೆಯಲ್ಲಿ ನೆನೆಸಿಡಿ. ಇದನ್ನು ಮಾರನೆಯ ಬೆಳ್ಳಿಗೆ ತಲೆಗೆ ಹಚ್ಚಿ ಒಂದು ಗಂಟೆಯ ನಂತರ ನೀರಿನಿಂದ ತೊಳೆಯಿರಿ. ಇದನ್ನು ಮಾಡುವುದರಿಂದ ಕೂದಲು ಒಳಗಿನಿಂದ ಧೃಡವಾಗಿ ಕಡಿಮೆ ಕಾಲದಲ್ಲಿಯೇ ಕೂದಲ ಬೆಳವಣಿಗೆ ಹೆಚ್ಚುವುದನ್ನು ನೋಡಬಹುದು.

ಒತ್ತಡವನ್ನು ಕಡಿಮೆ ಮಾಡಿದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ (De-stress to reduce hair loss)

ಒತ್ತಡ ಹೆಚ್ಚಾದಷ್ಟು ಕೂದಲು ಉದುರುವುದು, ನೆರೆ ಹಾಗೂ ದಟ್ಟಣೆ ಕಡಿಮೆಯಾಗುವಂತಹ ಸಮಸ್ಯೆಗಳು ಎದುರಾಗುತ್ತವೆ. ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ನಿಯಮಿತವಾದ ವ್ಯಾಯಾಮ, ಸರಿಯಾದ ಆಹಾರ ಸೇವನೆ ಹಾಗೂ ಯೋಗ ದಂತಹ ಯಾವುದಾದರೂ ಕಾರ್ಯಕ್ರಮಕ್ಕೆ ಸೇರಿಕೊಳ್ಳಿ. ಇದರಿಂದ ಒತ್ತಡ ಕಡಿಮೆಯಾಗಿ ಕೂದಲು ಉದುರುವುದು ಸಹ ಕಡಿಮೆ ಯಾಗುತ್ತದೆ.

ಈ ಮೇಲಿನ ಸಲಹೆಗಳನ್ನು ಬಳಸಿ ನಿಮ್ಮ ಕೂದಲು ಉದುರುವುದನ್ನು ನಿಲ್ಲಿಸಿ ಹಾಗೂ ನಿಮ್ಮ ದಪ್ಪ, ಹೊಳೆಯುವ ಅಂಧವಾದ ಕೂದಲಿನ ಜೊತೆಗೆ ಆತ್ಮವಿಶ್ವಾಸವನ್ನು ಹಿಂದಕ್ಕೆ ಪಡೆಯಿರಿ. ಈಗ ನಿಮ್ಮ ಕೂದಲ ದಟ್ಟಣೆ ಹೆಚ್ಚಿಸುವುದು ಸುಲಭ.

ಕೂದಲ ದಟ್ಟಣೆಯನ್ನು ಹೆಚ್ಚಿಸುವಲ್ಲಿ ಸಹಾಯವಾಗುವ ಸರಳ ನೈಸರ್ಗಿಕ ಸಲಹೆಗಳು (Simple tips to increase hair volume naturally)

ಆಲಿವ್ ಎಣ್ಣೆಯಿಂದ ಕೂದಲ ಬೆಳವಣಿಗೆ (Olive oil for hair growth)

ಆಲಿವ್ ಎಣ್ಣೆ ತಿನ್ನುವುದಕಷ್ಟೆ ಅಲ್ಲ ನಿಮ್ಮ ಚರ್ಮ ಹಾಗೂ ಕೂದಲಿಗೂ ಸಹ ಬಹಳ ಲಭಕಾರಿ. ಈಗ ಮಾರುಕಟ್ಟೆಯಲ್ಲಿ ಅನೇಕ ಕಾರಣಗಳಿಗಾಗಿ ಬಳಸುವ ಅನೇಕ ವಿಧದ ಆಲಿವ್ ಎಣ್ಣೆಗಳು ದೊರೆಯುತ್ತವೆ. ನೀವು ಕೂದಲಿಗೆ ಹಚ್ಚುವ ಆಲಿವ್ ಎಣ್ಣೆಯನ್ನು ತೆಗೆದುಕೊಂಡು ಹಚ್ಚಿಕೊಳ್ಳಬೇಕು. ಇದರಿಂದ ನಿಮ್ಮ ಕೂದಲು ಬುಡ ಮಟ್ಟದಿಂದ ಬಲಿಷ್ಟವಾಗುವುದಲ್ಲದೆ ಕೂದಲು ಮೃದು ಸಹ ಆಗುತ್ತದೆ. ಉತ್ತಮ ಫಲಿತಾಂಶ ಪಡೆಯಲು ಸ್ವಲ್ಪ ಆಲಿವ್ ಎಣ್ಣೆಯನ್ನು ಬೆಚ್ಚಗೆ ಮಾಡಿಕೊಂಡು ಅದನ್ನು ನಿಮ್ಮ ಕೂದಲು ಹಾಗೂ ನೆತ್ತಿಗೆ ಮಾಲಿಶು ಮಾಡಿಕೊಳ್ಳಿ. ಮೂರು ನಿಮಿಷಗಳ ನಂತರ ಮಂದವಾದ ಶ್ಯಾಂಪೂ ಬಳಸಿ ತೊಳೆದುಕೊಳ್ಳಿರಿ. ಇದರಿಂದ ನಿಮ್ಮ ಕೂದಲ ದಟ್ಟಣೆ ಹೆಚ್ಚುತ್ತದೆ.

ಅರಳೆ ಎಣ್ಣೆ ಇಂದ ಕೂದಲ ದಟ್ಟಣೆ ಹೆಚ್ಚಿಸುವುದು (Castor oil to increase hair volume)

ಅರಳೆ ಎಣ್ಣೆ ಮಂದವಾದ ಎಣ್ಣೆಯಾಗಿದ್ದು ಅದರ ವಾಸನೆ ಸ್ವಲ್ಪ ಜುಗುಪ್ಸೆ ಉಂಟಾಗಬಹುದು. ಆದರೆ ಬಹಳಷ್ಟು ಜನರು ಹೇಳುವಂತೆ ಅರಳೆ ಎಣ್ಣೆ ಬಳಸುವುದರಿಂದ ಕೂದಲ ದಟ್ಟಣೆ ಹೆಚ್ಚುತ್ತದೆ. ಅರಳೆ ಎಣ್ಣೆ ಹೆಚ್ಚು ಸ್ನಿಗ್ದವಾಗಿರುವುದರಿಂದ ಅದು ಕೂದಲನ್ನು ಚೆನ್ನಾಗಿ ಅಪ್ಪಿ ಅದು ಉದುರುವುದರಿಂದ ತಪ್ಪಿಸುತ್ತದೆ. ಅರಳೆ ಎಣ್ಣೆಯಲ್ಲಿ ಕೊಬ್ಬಿನ ಆಮ್ಲ ಹಾಗೂ “ಈ” ಜೀವಸತ್ವ ಇರುವುದರಿಂದ ಇದು ಕೂದಲು ಬೆಳೆಯುವುದನ್ನು ಹೆಚ್ಚಿಸುತ್ತದೆ. ಅರಳೆ ಎಣ್ಣೆ ಒಂದನ್ನೇ ಬಳಸುವುದು ಕಷ್ಟವೆನಿಸಿದರೆ ಅದನ್ನು ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಬಿಸಿ ಮಾಡಿ ಅದನ್ನು ಕೂದಲು ಹಾಗೂ ಅದರ ಬೇರಿಗೆ ಹಚ್ಚಿಕೊಳ್ಳಿ.

ಕೂದಲು ಉದುರುವುದನ್ನು ತಡೆಯಲು ಬೆಣ್ಣೆ ಹಣ್ಣಿನ ಕೇಶ ಲೇಪನ (Best hair pack for hair loss with avocado)

ಈ ದೇಶದ ಬಹಳಷ್ಟು ಜನಕ್ಕೆ ಈ ಹಣ್ಣು ಪ್ರಿಯವಾಗಿರಬಹುದು ಆದರೆ ಕೂದಲ ಆರೈಕೆಯಲ್ಲಿ ಈ ಹಣ್ಣಿನ ಬಳಕೆಯ ಬಗ್ಗೆ ಬಹಳಷ್ಟು ಮಂದಿಗೆ ತಿಳಿದಿಲ್ಲ. ಈ ಹಣ್ಣಿನಲ್ಲಿ “ಈ” ಜೀವಸತ್ವ ಹೇರಳವಾಗಿದೆ. ಹಾಗೂ ಕೂದಲ ಆರೈಕೆಯಲ್ಲಿ ಈ ಜೀವಸತ್ವ ಬಹಳ ಮುಖ್ಯ. ಈ ಮದ್ದಿಗಾಗಿ ಹಣ್ಣಾಗಿರುವ ಬೆಣ್ಣೆ ಹಣ್ಣನ್ನು ತೆಗೆದುಕೊಂಡು ಕೈಯಿಂದ ಹಿಚುಕಿ ಅಥವಾ ಜಜ್ಜಿ ಆ ತಿರುಳಿಗೆ ಒಂದು ಚಮಚೆಯಷ್ಟು ಆಲಿವ್ ಎಣ್ಣೆಯನ್ನು ಬೆರೆಸಿ ಸ್ವಲ್ಪ ಬಾಳೆಹಣ್ಣನು ಸೇರಿಸಬೇಕು. ಇದನ್ನು ಚೆನ್ನಾಗಿ ಕಲೆಸಿ ಕೂದಲಿಗೆ ಹಚ್ಚಿಕೊಳ್ಳಬೇಕು. ಇದನ್ನು ಮೂವತ್ತು ನಿಮಿಷಗಳವರೆಗೂ ಇರಿಸಿಕೊಳ್ಳಬೇಕು. ಈ ರೀತಿಯಾಗಿ ಮಾಡುವುದರಿಂದ ಅದರಲ್ಲಿನ ಪೋಷಕಾಂಶಗಳನ್ನು ಕೂದಲು ಹೀರಿಕೊಳ್ಳುವಲ್ಲಿ ಸಹಾಯವಾಗುವುದು. ನಂತರ ಕೂದಲನ್ನು ತೊಳೆದುಕೊಂಡು ಒಣಗಿದ ನಂತರ ವ್ಯತ್ಯಾಸ ನಿಮ್ಮಗೆ ತಿಳಿಯುತ್ತದೆ.

ಕೂದಲ ರಕ್ಷಣೆಗೆ ಶ್ಯಾಂಪೂ ಬಗೆಗೆ ಎಚ್ಚರದಿಂದಿರಿ (Caution of shampoo for hair growth)

ನಿಮ್ಮ ಕೂದಲಿಗೆ ಶ್ಯಾಂಪೂ ಆಯ್ದುಕೊಳ್ಳುವಾಗ ಬಹಳ ಎಚ್ಚರದಿಂದ ಇರಬೇಕಾಗುತ್ತದೆ. ಶ್ಯಾಂಪೂ ನಿಮ್ಮ ಕೂದಲಿನ ರೀತಿಗೆ ಹೊಂದುತ್ತದೆಯೇ ಇಲ್ಲವೇ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಬಹಳಷ್ಟು ವಿಷಯಗಳನ್ನು ಗಣನೆಗೆ ತೆಗೆದುಕೊಂಡು ನಂತರ ಶ್ಯಾಂಪುವನ್ನು ಆಯ್ದುಕೊಳ್ಳಬೇಕಾಗುತ್ತದೆ. ಕೇಶ ತಜ್ಞರ ಸಲಹೆ ಪಡೆದು ನಂತರ ಶ್ಯಾಂಪೂ ಆಯ್ದುಕೊಳ್ಳುವುದು ಉತ್ತಮ. ನೀವು ಶ್ಯಾಂಪೂವನ್ನು ನಿತ್ಯವೂ ಬಳುಸುವಿರಾದರೆ ನಿಮ್ಮಗೆ ಜಿಡ್ಡು ಹಾಗೂ ತೈಲಯುಕ್ತ ಕೂದಲು ಇರಬಹುದು. ನಿಮ್ಮಗೆ ಒಣ ಕೂದಲು ಇದ್ದರೆ ಹೆಚ್ಚು ಶ್ಯಾಂಪೂ ಬಳಸುವುದರಿಂದ ಮತ್ತಷ್ಟು ಹಾನಿಯಾಗುವ ಸಾಧ್ಯತೆಯಿದೆ.

ಈರುಳ್ಳಿಯ ರಸದಿಂದ ಉದ್ದ ಕೂದಲಿಗಾಗಿ ಕೇಶ ಲೇಪನ (Top hair packs for long hair with onion juice)

ನಿಮ್ಮ ಅಜ್ಜಿ ನಿಮಗೆ ಈ ಮದ್ದಿನ ಬಗ್ಗೆ ಹೇಳಿರಬಹುದು. ಈ ನೈಸರ್ಗಿಕ ಮದ್ದಿನಿಂದ ಬಹಳಷ್ಟು ಮಂದಿ ಮನೆಯಲ್ಲಿ ಕುಳಿತೆ ಲಾಭವನ್ನು ಪಡೆದಿದ್ದಾರೆ. ಈರುಳ್ಳಿಯಲ್ಲಿರುವ ಗಂಧಕದ ಅಂಶ ನಮ್ಮ ದೇಹದಲ್ಲಿ ಉತ್ಪತ್ತಿ ಯಾಗುವ ಕಲಾಜೆನ್ ಅಂಶವನ್ನು ಹೆಚ್ಚಿಸುತ್ತದೆ. ಇದರಿಂದ ಕೂದಲ ಬೆಳವಣಿಗೆ ಹೆಚ್ಚುತ್ತದೆ. ಈರುಳ್ಳಿಯನ್ನು ರುಬ್ಬಿ ಅದರ ರಸವನ್ನು ಹಿಂಡಿ ಅದನ್ನು ಕೂದಲ ಬುಡಕ್ಕೆ ಹಚ್ಚಿ. ಹದಿನೈದು ನಿಮಿಷಗಳ ನಂತರ ನೀರಿನೀಂದ್ ತೊಳೆಯಿರಿ.

ಅಗಸೆ ಬೀಜದಿಂದ ಮನೆ ಮದ್ದು (Flaxseeds remedy)

ಕೂದಲ ದಟ್ಟಣೆ ಹೆಚ್ಚುವುದಕ್ಕಾಗಿ ಅಗಸೆ ಬೀಜ ಬಹಳ ಉಪಯುಕ್ತ ಪದಾರ್ಥ. ಹೌದು. ಒಂದು ಬಟ್ಟಲಲ್ಲಿ ಮೂರರಲ್ಲಿ ಒಂದು ಭಾಗ ಅಗಸೆ ಬೀಜ ತೆಗೆದುಕೊಂಡು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಮಾರನೆಯ ಬೆಳ್ಳಿಗ್ಗೆ ಅದನ್ನು ಕುದಿಸಿರಿ. ಇದರಿಂದ ಲೋಳಿಯಂತಹ ಸ್ತಿತಿಗೆ ಅಗಸೆ ಬೀಜ ಬರುತ್ತದೆ. ನಂತರ ಅದನ್ನು ತಣ್ಣಗಾಗಲು ಬಿಡಿ. ಈ ಮಿಶ್ರಣವನ್ನು ತಲೆಗೆ ಹಚ್ಚಿಕೊಂಡು ಮೆರೆಯುವ ಕೂದಲನ್ನು ಪಡೆಯಿರಿ.

ಸೀಗೆಕಾಯಿಯಿಂದ ಕೇಶ ಮರ್ಜನ (Shikakai for shampooing)

ನೀವು ಕೂದಲು ತೊಳೆಯಲಿಕ್ಕೆ ರಾಸಾಯನಿಕಗಳಿಂದ ತುಂಬಿರುವ, ಕೂದಲು ಬೆಳೆಯಲು ಸಹಕರಿಸುವುದೆಂದು ಹೇಳುವ ಶ್ಯಾಂಪೂಗಳನ್ನು ಬಳಸುತಿರುವಿರಾದರೆ ನೈಸರ್ಗಿಕವಾದ ಮಾರ್ಗವನ್ನು ಅನುಸರಿಸಬಹುದು. ಸೀಗೆಕಾಯಿ ಅತಾರಹದ ಒಂದು ಸಾಬೂನು. ಸೀಗೆಕಾಯಿ ಬಳಸಿ ಕೂದಲು ತೊಳೆಯುವುದರಿಂದ ನಿಮ್ಮ ಕೂದಲ ದಟ್ಟಣೆ ನೈಸರ್ಗಿಕವಾಗೆ ಹೆಚ್ಚುತ್ತದೆ. ವರ್ಷಗಳಿಂದ ಸೀಗೆಕಾಯಿ ಎಲ್ಲಾ ವಯೋಮಾನದ ಮಹಿಳೆಯರಿಗೆ ಉದ್ದದ ಕೂದಲನ್ನು ನಿರ್ವಹಿಸಲು ಸಹಾಯ ಮಾಡುತ್ತಿದೆ. ನೀವು ಸಹ ಇದನ್ನು ಬಳಸಿ ಲಾಭವನ್ನು ಪಡೆಯಬಹುದು.

ಅಮ್ಟಳ ಕಾಯಿ (Reetha)

ಕೂದಲ ತೊಳೆಯಲು ಅಮ್ಟಳ ಕಾಯಿಯನ್ನು ಸಹ ಬಳಸುತ್ತಾರೆ. ನಿಮ್ಮ ಕೂದಲನ್ನು ಬುಡದಿಂದ ಗಟ್ಟಿಗೊಳಿಸಲು ಅಮ್ಟಳ ಕಾಯಿ ಬಹಳ ಸಹಾಯ ಮಾಡುತ್ತದೆ. ಮಾರುಕಟ್ಟೆಯಲ್ಲಿ ದುಬಾರಿಯಾದ ಶ್ಯಾಂಪೂಗಳು ಬರುವುದಕ್ಕೆ ಮುನ್ನ ಜನರು ನೈಸರ್ಗಿಕವಾದ ಸಾಬೂನುಗಳನ್ನು ಮಾತ್ರ ಬಳಸುತ್ತಿದ್ದರು. ಅಮ್ಟಳ ಕಾಯಿ ಆ ರೀತಿಯ ಒಂದು ಸಾಬೂನು. ಇದು ನಿಮ್ಮ ಕೂಡ್ಳನ್ನು ಶುದ್ದವಾಗಿ ಇರಿಸುವುದಲ್ಲದೆ ಕೂದಲು ದಟ್ಟವಾಗುವುದಕ್ಕೆ ಸಹಾಯಮಾಡುತ್ತದೆ. ಇದು ನಿಮ್ಮ ಕೂದಲು ಕಾಪಾಡಲು ಒಂದು ಅದ್ಭುತವಾದ ಪದಾರ್ಥ.